ಕಾರ್ಕಳ: ಮದ್ಯಪಾನ ಮಾಡಲೆಂದು ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಎ.27ರಂದು ನಡೆದಿದೆ.
ಕಾರ್ಕಳ ತಾಲೂಕಿನ ನಲ್ಲೂರು ಕಳತ್ರಪಾದೆ ನಿವಾಸಿ ರವೀಂದ್ರ ಪೂಜಾರಿ (38 ವರ್ಷ) ಮೃತಪಟ್ಟವರು. ರವೀಂದ್ರ ಪೂಜಾರಿ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಪ್ರತಿದಿನ ಮಂಜಾನೆ 6:30ಕ್ಕೆ ಮಧ್ಯಪಾನ ಮಾಡಲು ಬಜಗೋಳಿಯ ಚಿರಾಗ್ ಬಾರ್ಗೆ ಹೋಗುತ್ತಿದ್ದರು.
ನಿನ್ನೆ ಕೂಡ ಎಂದಿನAತೆ ಮುಂಜಾನೆ 6.30ಕ್ಕೆ ಮದ್ಯಪಾನ ಮಾಡಲು ಮನೆಯಿಂದ ಬಜಗೋಳಿ ಕಡೆಗೆ ಹೋದವರು ಚಿರಾಗ್ ಬಾರ್ನ ಹಿಂಬದಿಯಲ್ಲಿರುವ ಹಾಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.