ಕಾರ್ಕಳ: ಚಲಿಸುತ್ತಿದ್ದ ಸ್ಕೂಟರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಸೇರಿ ಮೂವರಿಗೆ ಗಾಯಗಳಾಗಿವೆ.
ನಲ್ಲೂರು ಗ್ರಾಮದ ಬೀರಾಲುಪೇಟೆ ಎಂಬಲ್ಲಿನ ನಿವಾಸಿ ಚೇತನಾ ಎಂಬವರು ಭಾನುವಾರ ಬೆಳಗ್ಗೆ 9.40ರ ಸುಮಾರಿಗೆ ತನ್ನ ಸ್ಕೂಟರಿನಲ್ಲಿ ಸಹಸವಾರಾಗಿ ಆಕೆಯ ಅಕ್ಕನಮಗ ಪ್ರಾಣೇಶ್ ಹಾಗೂ ರಜನಿ ಎಂಬವರನ್ನು ಕುಳ್ಳಿರಿಸಿಕೊಂಡು ಬಜಗೊಳಿ ಕಡೆಯಿಂದ ಹೊಸ್ಮಾರು ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿAದ ಬೈಕ್ ಸವಾರ ಹೃತ್ವಿಕ್ ತನ್ನ ಬೈಕಿನಲ್ಲಿ ವೇಗವಾಗಿ ಬಂದು ಚೇತನಾ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ.
ಈ ಅಪಘಾತದಿಂದ ಸ್ಕೂಟರ್ ಸವಾರಿಣಿ ಚೇತನಾ, ಸಹಸವಾರರಾದ ಪ್ರಾಣೇಶ್ ಹಾಗೂ ರಜನಿ ಅವತ ತಲೆ ಹಾಗೂ ಕೈಕಾಲಿಗೆ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



