Share this news

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೊಷಣೆ ಮಾಡಲಾಗಿತ್ತು. ಆದರೆ, ರಾಜ್ಯಾದ್ಯಂತ ತಮ್ಮ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವಂತೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡವು ಪ್ರಸ್ತಾವಿತ ತಾಲೂಕುಗಳಲ್ಲಿನ ಬರ‌ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದು, ಪುನಃ 32 ತಾಲೂಕುಗಳಲ್ಲಿ ಮಳೆ ಕೊರತೆಯಾಗಿರುವುದು ಕಂಡುಬರುತ್ತಿದೆ. ಆದ್ದರಿಂದ ಮತ್ತೊಮ್ಮೆ ಸಭೆ ಕರೆದು ಬರಪೀಡಿತ ತಾಲೂಕುಗಳನ್ನು ಸೇರ್ಪಡೆ ಮಾಡಿ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ 195 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಆನ್ ಲೈನ್ ಮುಖಾಂತರ ಬರಪೀಡಿತ ತಾಲೂಕುಗಳ ಪಟ್ಟಿಗಳನ್ನು ಸಲ್ಲಿಕೆ ಮಾಡಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿ ಮೇಲೆ ಕೇಂದ್ರ ಬರ ತಂಡ ರಾಜ್ಯಕ್ಕೆ ಬಂದಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮನವಿ ಮೇರೆಗೆ ಅಜೀತ್ ಕುಮಾರ್ ಸಾಹೂ ನೇತೃತ್ವದ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಿದೆ. ನಾವು ರಾಜ್ಯದ ಬರ ಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ರೈತರಿಗೆ ಆಗಿರುವ ಸಂಕಷ್ಟ ಗಮನಕ್ಕೆ ತಂದು ಅಂಕಿ ಅಂಶಗಳ ಮನವರಿಕೆ ಮಾಡಿದ್ದೇವೆ. ಇಂದಿನಿAದ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ಮಾಡುತ್ತಾರೆ. ಅವರೊಂದಿಗೆ ತೆರಳಲು ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೂಡ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.

ರೈತರು ಮತ್ತು ತಜ್ಞರ ಜೊತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದ್ದು, ಜೊಳ, ತೊಗರಿ, ಶೆಂಗಾ ಎಲ್ಲ ಬೆಳೆಗಳಿದ್ದರೂ ಇಳುವರಿ ಇಲ್ಲವೆಂದು ತಿಳಿಸಿದ್ದಾರೆ. ಹೀಗಾಗಿ, ಕೇಂದ್ರದ ತಂಡಕ್ಕೆ ಆಳವಾಗಿ ಅಧ್ಯಯನ ಮಾಡಲು ಮನವಿ ಮಾಡಿದ್ದೇವೆ. 3 ದಿನಗಳ ಕಾಲ ರಾಜ್ಯದ ಅಧ್ಯಯನ ನಡೆಯುತ್ತದೆ. ಬಳಿಕ ಮತ್ತೆ ಸಭೆ ನಡೆಯಲಿದೆ. ಬರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡಿದ್ದೇವೆ. 195 ತಾಲೂಕು ಘೋಷಣೆ ಅಂತಿಮವಲ್ಲ, ಇನ್ನೂ 32 ತಾಲೂಕಿನಲ್ಲಿ ಮಳೆ ಕೊರತೆ ಇದೆ. ಮತ್ತೆ ಸಭೆ ಸೇರಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ಈಗಾಗಲೇ ರಾಜ್ಯದಲ್ಲಿ ಶೇ.28 ಮಳೆ ಕೊರತೆಯಾಗಿದೆ.ಇದರಿಂದ ಆಹಾರದ ಕೊರತೆಯೂ ಎದುರಾಗಲಿದೆ. ಕೇಂದ್ರದ ಅಧಿಕಾರಿಗಳಿಗೆ ನಿಖರವಾದ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ. 4,800 ಕೋಟಿ ರೂ. ಪರಿಹಾರ ಕೇಳಿದ್ದೇವೆ. ನಮಗಿಂತ ಹೆಚ್ಚು ಮಳೆ ಕೊರತೆ ಬೇರೆ ರಾಜ್ಯದಲ್ಲಿ ಇದೆ. ಆದರೆ ಬರವೆಂದು ನಾವು ಮಾತ್ರ ಘೋಷಣೆ ಮಾಡಿದ್ದು, ನಾವು ಬರದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ನ್ಯಾಯಯುತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತದೆ. ನಮ್ಮ ಮನವಿಗೆ ಸ್ಪಂದನೆ ಮಾಡ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಸಭೆಗಳಲ್ಲಿ ಹೇಳುವ ಮುಖ್ಯಮಂತ್ರಿಯವರು ಯಾವ ರೀತಿ ಒಂದೇ ಸಮುದಾಯದ ಓಲೈಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳೇ ಸಾಕ್ಷಿ. ಶಿವಮೊಗ್ಗ ಗಲಭೆ, ಕೋಲಾರದ ಅತಿರೇಕದ ವರ್ತನೆಗಳೆಲ್ಲ ಸರಕಾರದ ಕುಮ್ಮಕ್ಕಿನಿಂದಲೇ ನಡೆದಿರುವುದು ಸ್ಪಷ್ಟ. ಇವುಗಳಿಗೆಲ್ಲ ನ್ಯಾಯ ಕೇಳಿದವರನ್ನೇ ಕೇಸು ಹಾಕಿ ಜೈಲಿಗೆ ಕಳುಹಿಸುವ ದಮನಕಾರಿ ನೀತಿಯನ್ನು ಸರಕಾರ ಅನುಸರಿಸುತ್ತಿದೆ. ಜನರ ನೆಮ್ಮದಿಯ ಜೀವನ ಕಸಿದಿರುವ ಕಾಂಗ್ರೆಸ್ ಸರಕಾರ ವಾಸ್ತವ ವಿಚಾರವನ್ನು ಅರಿತು ಬದುಕಲು ಬಿಡಬೇಕೆಂದು ಮಹಾವೀರ ಹೆಗ್ಡೆ ಸರಕಾರವನ್ನು ಆಗ್ರಹಿಸಿದ್ದಾರೆ.

 

 

 

 

 

 

 

 

 

Leave a Reply

Your email address will not be published. Required fields are marked *