Share this news

ನವದೆಹಲಿ: ಬಿಜೆಪಿ ಈಗಾಗಲೇ 189 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಇದೀಗ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಲಿ ಸಚಿವರು ಹಾಗೂ ಶಾಸಕರಿಗೆ ಗೇಟ್ ಪಾಸ್ ನೀಡಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಅಚ್ಚರಿಮೂಡಿಸಿತ್ತು.


ಇದೀಗ ಘೋಷಣೆಯಾಗಿರುವ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ 6 ಜನ ಹಾಲಿ ಶಾಸಕರಿಗೆ ಈ ಬಾರಿ ಕೋಕ್ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ.


ಎರಡನೇ ಪಟ್ಟಿ ಬಿಡುಗಡೆಗೊಂಡರೂ ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಗೋವಿಂದರಾಜ ನಗರ ಸೇರಿದಂತೆ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸದಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿ ಬಿಡುಗಡೆ ಮಾಡಿರುವ 23 ಅಭ್ಯರ್ಥಿಗಳ ಪಟ್ಟಿ ಇಂತಿದೆ:

ದೇವರಹಿಪ್ಪರಗಿ- ಸೋಮನಗೌಡ ಪಾಟೀಲ (ಸಾಸನೂರು), ಬಸವನ ಬಾಗೇವಾಡಿ- ಎಸ್.ಕೆ. ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದ‌ರ್, ಗುರುಮಿಟ್ಕಲ್- ಲಲಿತಾ ಅನಾಪುರ, ಬೀದರ್- ಈಶ್ವರ್ ಸಿಂಗ್ ಠಾಕೂರ್ ಬಾಲ್ಕಿ- ಪ್ರಕಾಶ್ ಖಂಡ್ರೆ, ಗಂಗಾವತಿ-ಪರಣ್ಣ ಮುನವಳ್ಳಿ, ಕಲಘಟಗಿ- ನಾಗರಾಜ್ ಛಬ್ಬಿ, ಹಾನಗಲ್-ಶಿವರಾಜ ಸಜ್ಜನ‌, ಹಾವೇರಿ-ಗವಿಸಿದ್ದಪ್ಪ ದ್ಯಾಮಣ್ಣನವ‌ರ್, ಹರಪ್ಪನಹಳ್ಳಿ-ಕರುಣಾಕರ ರೆಡ್ಡಿ, ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ- ಅಜಯ್‌ಕುಮಾರ್, ಮಾಯಕೊಂಡ-ಬಸವರಾಜ ನಾಯಕ್, ಚನ್ನಗಿರಿ-ಶಿವಕುಮಾರ್, ಬೈಂದೂರು-ಗುರುರಾಜ್ ಗಂಟೀಹೊಳೆ, ಮೂಡಿಗೆರೆ-ದೀಪಕ್ ದೊಡ್ಡಯ್ಯ, ಗುಬ್ಬಿ-ಎಸ್.ಟಿ.ದಿಲೀಪ್‌ಕುಮಾರ್, ಶಿಡ್ಲಘಟ್ಟ-ರಾಮಚಂದ್ರಗೌಡ, ಕೆಜಿಎಫ್- ಅಶ್ವಿನಿ ಸಂಪಂಗಿ, ಶ್ರವಣಬೆಳಗೊಳ- ಚಿದಾನಂದ, ಅರಸೀಕೆರೆ- ಜಿ.ವಿ.ಬಸವರಾಜ್, ಹೆಚ್.ಡಿ.ಕೋಟೆ-ಕೃಷ್ಣ ನಾಯಕ್

ಟಿಕೆಟ್ ಕೈ ತಪ್ಪಿದ ಹಾಲಿ ಶಾಸಕರು

ಮೂಡಿಗೆರೆ; ಎಂ.ಪಿ.ಕುಮಾರಸ್ವಾಮಿ, ಬೈಂದೂರು; ಸುಕುಮಾರ ಶೆಟ್ಟಿ, ಚನ್ನಗಿರಿ: ಮಾಡಾಳು ವಿರೂಪಾಕ್ಷಪ್ಪ, ಹಾವೇರಿ;ನೆಹರೂ ಓಲೇಕಾ‌ರ್, ಮಾಯಕೊಂಡ; ಪ್ರೊ.ಲಿಂಗಣ್ಣ, ಕಲಘಟಗಿ;ಸಿ.ಎಂ.ನಿಂಬಣ್ಣನವರ್,ದಾವಣಗೆರೆ ಉತ್ತರ ಕ್ಷೇತ್ರ:ಎಚ್.ಕೆ ರವೀಂದ್ರನಾಥ್

Leave a Reply

Your email address will not be published. Required fields are marked *