ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಕೈಗೊಂಡಿದ್ದ ಎಲ್ಲ ಕಾಮಗಾರಿಗಳಿಗೂ ಹಣ ಬಿಡುಗಡೆಗೆ ತಡೆ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಅಂತಹ ಮುಂದುವರೆದ ಕಾಮಗಾರಿಗಳಿಗೆ ಬಿಲ್ಲುಗಳ ನೈಜತೆ ಪರಿಶೀಲಿಸಿ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆಗೆ ಆದೇಶಿಸಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಇಲಾಖೆಗಳು ಹಾಗೂ ಅವುಗಳ ವ್ಯಾಪ್ತಿಯ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದಂತೆ ಹಾಗೂ ಆರಂಭವೇ ಆಗದ ಕಾಮಗಾರಿಗಳನ್ನು ತಡೆ ಹಿಡಿದು ಮೇ 22ರಂದು ಆದೇಶಿಸಿತ್ತು. ಈ ಪೈಕಿ ಪ್ರಾರಂಭವಾಗದಿರುವ ಕಾಮಗಾರಿಗಳಿಗೆ ನೀಡಿದ್ದ ತಡೆಯನ್ನು ಯಥಾಸ್ಥಿತಿ ಮುಂದುವರೆಸಿದೆ. ಈಗಾಗಲೇ ಆರಂಭವಾಗಿರುವ ಅಥವಾ ಮುಂದುವರೆದ ಕಾಮಗಾರಿಗಳಿಗೆ ಬಿಲ್ಲುಗಳ ನೈಜತೆ ಹಾಗೂ ನಿಯಮಾನುಸಾರವಾಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು ಹಣ ಬಿಡುಗಡೆ ಮಾಡಬೇಕು. ಹಣ ಬಿಡುಗಡೆಗೆ ಸಂಬAಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ ಎಲ್ಲಾ ಶಾಸನಬದ್ಧ ಪಾವತಿಗಳನ್ನು ಹಾಗೂ ಬಾಹ್ಯ ನೆರವಿನ ಮುಂದುವರೆದ ಯೋಜನೆಗಳಿಗೆ ಸಂಬAಧಿಸಿದAತೆ ಹಣ ಬಿಡುಗಡೆ, ಪಾವತಿಗಳನ್ನು ಮಾಡುವುದು. ಮುಂದುವರೆದ ಕಾರ್ಯಕ್ರಮಗಳ, ಯೋಜನೆಗಳಿಗೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬAಧವೂ ಹಣ ಬಿಡುಗಡೆ ಮಾಡಬಹುದು ಎಂದು ತಿಳಿಸಿದೆ.