ಕಾರ್ಕಳ: ಎರಡನೇ ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತವಿದ್ದರೂ ಬಂಡಾಯದ ಬೇಗುದಿಯಿಂದ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಇದರಿಂದ ಬಿಜೆಪಿಗೆ ತೀವೃ ಮುಖಭಂಗವಾಗಿದೆ.
ಒಟ್ಟು 33 ಸದಸ್ಯಬಲ ಹೊಂದಿರುವ ಕುಕ್ಕುಂದೂರು ಪಂಚಾಯಿತಿಯಲ್ಲಿ 21 ಬಿಜೆಪಿ ಹಾಗೂ 12 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು ಆದರೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಬ್ಬರು ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡ ಕಾರಣದಿಂದ ಬಿಜೆಪಿಯ ಸದಸ್ಯಬಲ 19ಕ್ಕೆ ಇಳಿದಿತ್ತು. ಈ ಲೆಕ್ಕಾಚಾರವನ್ನು ಗಮನಿಸಿದಾಗ ಇಲ್ಲಿ ಬಿಜೆಪಿ ಅನಾಯಾಸವಾಗಿ ಅಧಿಕಾರ ಪಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿತ್ತು. ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನ ಎಸ್ ಸಿ ಮಹಿಳಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶೋಭಾ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಉಷಾ ಮೋಹನ್ ಸ್ಪರ್ಧಿಸಿದ್ದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ತಲಾ 16 ಮತಗಳು ಚಲಾವಣೆಯಾಗಿ ಒಂದು ಮತ ಅಸಿಂಧುವಾಗಿತ್ತು. ಸಮಬಲದ ಫಲಿತಾಂಶ ಬಂದ ಬಳಿಕ ಚೀಟಿ ಎತ್ತುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಷಾ ಮೋಹನ್ ಅವರಿಗೆ ಅದೃಷ್ಟ ಒಲಿಯುವ ಮೂಲಕ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿಶಾ ಪ್ರಕಾಶ್ ಅವರು 3 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ ಎದುರು ಪರಾಭವಗೊಂಡು ಎರಡೂ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡು ಅಧಿಕಾರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಮೂಲಕ ಬಿಜೆಪಿಗೆ ಮುಜುಗರವಾಗಿದೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಈ ಗೆಲುವು ಹೊಸ ಉತ್ಸಾಹ ಮೂಡಿಸಿದೆ.
ಬಿಜೆಪಿ ಈ ಅನಿರೀಕ್ಷಿತ ಸೋಲಿನಿಂದ ಕಂಗಾಲಾಗಿದ್ದು ಸ್ಥಳೀಯರ ಬಿಜೆಪಿ ನಾಯಕರ ವಿರುದ್ಧದ ಅಸಮಾಧಾನದಿಂದಲೇ ಬಿಜೆಪಿಗೆ ಸೋಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.ಬಿಜೆಪಿಯ ಪ್ರಭಾವಿ ಸ್ಥಳೀಯ ನಾಯಕರು ತಮ್ಮ ಕುಟುಂಬ ಸದಸ್ಯರಿಗೆ ಅಧಿಕಾರ ಹಂಚಿಕೆ ಮಾತ್ರವಲ್ಲದೇ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ನೀಡುತ್ತಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲಾ ಗೊಂದಲಗಳಿದ್ದರೂ ಬಿಜೆಪಿ ನಾಯಕರು ಇದನ್ನು ಬಗೆಹರಿಸದೇ ಬಿಟ್ಟಿದ್ದು ಅಧಿಕಾರ ಕೈತಪ್ಪಲು ಕಾರಣವಾಗಿದೆ ಎನ್ನಲಾಗುತ್ತಿದೆ.
34 ಸದಸ್ಯಬಲವನ್ನು ಹೊಂದಿರುವ ಕುಕ್ಕುಂದೂರು ಗ್ರಾಮ ಪಂಚಾಯಿತಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಗರಿಷ್ಠ ಸ್ಥಾನಗಳನ್ನು ಹೊಂದಿರುವ ಏಕೈಕ ಪಂಚಾಯತ್ ಆಗಿದೆ, ಮಾತ್ರವಲ್ಲದೇ ತಾಲೂಕು ಕೇಂದ್ರದಕ್ಕೆ ಹೊಂದಿಕೊAಡಿರುವ ಪಂಚಾಯತ್ ಆಗಿರುವುದರಿಂದ ಇದು ಗ್ರಾಮ ಸರ್ಕಾರದ ಕೇಂದ್ರಬಿAದು ಎನಿಸಿಕೊಂಡಿದೆ. ಅಲ್ಲದೇ ಈ ಪಂಚಾಯಿತಿ ಆಡಳಿತ ತೆಕ್ಕೆ ಪಡೆಯುವುದರ ಜತೆಗೆ ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದೇ ವಿಶ್ಲೇಪಿಸಲಾಗುತ್ತಿದೆ.






