ಬೆಂಗಳೂರು:ಶಿಕಾರಿಪುರ ಕ್ಷೇತ್ರದ ಬಿಜೆಪಿ ಶಾಸಕ, ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರ ಪೊಲೀಸ್ ಎಸ್ಕಾರ್ಟ್ ಸೌಲಭ್ಯವನ್ನು ನೀಡಿ ಆದೇಶ ಹೊರಡಿಸಿದೆ.
ಮೂವರು ಪೊಲೀಸ್ ಸಿಬ್ಬಂದಿಗಳ ಬೆಂಗಾವಲು ವಾಹನ(ಎಸ್ಕಾರ್ಟ್) ಬಿ.ವೈ ವಿಜಯೇಂದ್ರ ಅವರ ಭದ್ರತೆಯನ್ನು ನೋಡಿಕೊಳ್ಳಲಿದೆ. ನವೆಂಬರ್ 15ರಂದು ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕೃತವಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ, ಬೆಂಗಾವಲು ವಾಹನ ನೀಡಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಹಾಲಿ ಶಾಸಕರಿಗೆ ನೀಡುವ ಪೊಲೀಸ್ ಭದ್ರತೆ ಅವರಿಗೆ ಇರಲಿದೆ. ಅದರ ಜೊತೆಗೆ ಹೆಚ್ಚುವರಿ ಪೊಲೀಸ್ ಬೆಂಗಾವಲು ವಾಹನವನ್ನು ನೀಡಲಾಗಿದೆ. ವಿಜಯೇಂದ್ರ ಸಂಚರಿಸುವ ವೇಳೆಯಲ್ಲಿ ಈ ವಾಹನ ಬೆಂಗಾವಾಲಾಗಿ ಇರಲಿದೆ.