ಬೆಂಗಳೂರು: ಕಳೆದ 7 ತಿಂಗಳಿನಿAದ ಬಾಕಿ ಉಳಿದಿದ್ದ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಕೊನೆಗೂ ನೇಮಕ ಮಾಡಿದೆ. ಇಂದು ಸಂಜೆ ಬೆಂಗಳೂರಿನ ಐಟಿಸಿ ಹೊಟೇಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಹೈಕಮಾಂಡ್ ವೀಕ್ಷಕರಾಗಿ ಆಗಮಿಸಿದ ನಿರ್ಮಲಾ ಸೀತಾರಾಮನ್ ಹಾಗೂ ದುಶ್ಯಂತ ಕುಮಾರ್ ಅವರು ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಅವರ ಹೆಸರನ್ನು ಘೋಷಿಸಿದ್ದಾರೆ. ಈ ಮೂಲಕ ಸದನದಲ್ಲಿ ಸಾಮ್ರಾಟನ ದರ್ಬಾರ್ ಆರಂಭವಾಗಿದೆ
ಲಿAಗಾಯತ ಸಮುದಾಯದವನ್ನು ಓಲೈಸಲು ಇದೀಗ ಬಿಜೆಪಿಯು ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದು, ಇದೀಗ ಒಕ್ಕಲಿಗರ ಸಮುದಾಯದವರನ್ನು ಸೆಳೆಯಲು ಮಾಜಿ ಸಚಿವ ಅಶೋಕ್ ಅವರನ್ನು ವಿಪಕ್ಷ ನಾಯಕನಾಗಿ ನೇಮಕ ಮಾಡಿದೆ. ಈ ಹಿನೆಲೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮತಗನ್ನು ಸೆಳೆಯುವ ತಂತ್ರಗಾರಿಕೆಯನ್ನು ಬಿಜೆಪಿ ರೂಪಿಸಿದೆ.
ಇತ್ತ ಬಿಜೆಪಿ ವರಿಷ್ಠರು ಮಾಜಿ ಸಚಿವ ಆರ್ ಅಶೋಕ್ ಅವರ ಹೆಸರನ್ನು ವಿಪಕ್ಷ ನಾಯಕನ ಆಯ್ಕೆಗೆ ಪ್ರಸ್ತಾಪಿಸುತ್ತಿದ್ದಂತೆ ಯತ್ನಾಳ್ ಅವರು ಸಭೆಯಿಂದ ಹೊರ ನಡೆದರು. ಅವರ ಜೊತೆಗೆ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ ಕೂಡ ಹೊರ ನಡೆದರು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿದ್ದಕ್ಕೆ ಯತ್ನಾಳ್ ಅವರಲ್ಲಿ ಅಸಮಾಧಾನ ಇತ್ತು ವಿಜೇಂದ್ರ ನೇಮಕಾತಿಗೆ ಯತ್ನಾಳ್ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ ವಿಪಕ್ಷ ನಾಯಕ ವಿಚಾರದಲ್ಲಿ ಮತ್ತಷ್ಟು ವರಿಷ್ಠ ನಿರ್ಧಾರ ಯತ್ನಾಳ್ ಅವರಿಗೆ ಸಿಟ್ಟು ತಿಳಿಸಿದೆ ಹೈ ಕಮಾಂಡ್ ನಿರ್ಧಾರ ಒಪ್ಪದೇ ವೀಕ್ಷಕರೆ ಮುಂದೆ ಕಟುಶಬ್ದಗಳ ಬಳಕೆ ಮಾಡಿ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಿಂದ ಹೊರ ನಡೆದಿದ್ದಾರೆ. ಅವರ ಜೊತೆಗೆ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ ಕೂಡ ಹೊರ ನಡೆದು ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.








