Share this news

ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಅಸಮಾಧಾನ ಭುಗಿಲೆದ್ದಿದೆ. ಶಾಸಕಾಂಗ ಸಭೆ ಆರಂಭಕ್ಕೂ ಮುನ್ನವೇ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಹೊರನಡೆದಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ಆಗಮಿಸಿದ್ದರು. ಆದರೆ ಇನ್ನೇನು ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಚಾ ಕುಡಿಯಲೆಂದು ಹೇಳಿ ಹೊರ ಹೋಗುವುದಾಗಿ ಹೇಳಿ, ಬಡವರು ಚಹಾ ಕುಡಿಯುವ ಜಾಗ ಇದಲ್ಲ ಎಂದು ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.ವಿಪಕ್ಷ ನಾಯಕನಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಸುಳಿವು ಮೊದಲೇ ಸಿಕ್ಕ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಯತ್ನಾಳ್ ಅವರು ಸಭೆಯಿಂದ ಹೊರನಡೆದಿರಬಹುದು ಎನ್ನಲಾಗಿದೆ
ಶಾಸಕಾಂಗ ಪಕ್ಷದ ಸಭೆಗೂ ಮೊದಲು ದೆಹಲಿಯಿಂದ ಬಂದ ವೀಕ್ಷಕರ ಜೊತೆಗೆ ರಾಜ್ಯ ಬಿಜೆಪಿ ಪ್ರಮುಖರು ಮಾತುಕತೆ ನಡೆಸಿದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ಪ್ರಮುಖ ನಾಯಕರ ಜೊತೆಗೆ ವೀಕ್ಷಕರು ಮಾತುಕತೆ ನಡೆಸಿದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆರ್. ಅಶೋಕ್ ಹಾಗೂ ಅಶ್ವತ್ಥ ನಾರಾಯಣ ಹೆಸರು ಮುಂಚೂಣಿಯಲ್ಲಿದೆ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಬೇಕಾಗಿದೆ. ಒಂದು ವೇಳೆ ಹಾಗಾದಲ್ಲಿ ಆರ್. ಅಶೋಕ್ ಅಥವಾ ಅಶ್ವತ್ಥ ನಾರಾಯಣ ಅವರಿಗೆ ನೀಡುವ ಸಾಧ್ಯತೆ ಇದೆ.

ಸಭೆಗೆ ವೀಕ್ಷಕರಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ,ಯಲಹAಕ ವಿಶ್ವನಾಥ್, ಮುನಿರತ್ನ ನಾಯ್ಡು, ಕೆ. ಗೋಪಾಲಯ್ಯ, ಸುನಿಲ್ ಕುಮಾರ್, ಸುರೇಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್ ಅಶೋಕ್, ಅಶ್ವತ್ಥ ನಾರಾಯಣ,ಎಸ್ ರಘು, ಸುರೇಶ್ ಗೌಡ, ಅರವಿಂದ ಬೆಲ್ಲದ ಆಗಮಿಸಿದ್ದಾರೆ.

ಸಭೆಯ ಕುರಿತಾಗಿ ಶಾಸಕ ವಿಶ್ವನಾಥ್ ಮಾತನಾಡಿ, ವಿಪಕ್ಷ ನಾಯಕನ ಆಯ್ಕೆ ಸಂಬAಧಿಸಿದAತೆ ಮಾಧ್ಯಮಗಳ ಮೂಲಕ ಕೆಲವು ಹೆಸರುಗಳು ಕೇಳಿಬರುತ್ತಿದೆ. ಆದರೆ ವರಿಷ್ಠರ ಆಯ್ಕೆಗೆ ನಾವೆಲ್ಲಾ ಬದ್ಧ. ಸಭೆಯಲ್ಲಿ ಈ ಕುರಿತಾಗಿ ವೈಯಕ್ತಿಕ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದರು. ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಂದು ಮಾತನಾಡಲು ಹೋಗಲ್ಲ. ಪಕ್ಷದ ಹಿತ ದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದರು.

Leave a Reply

Your email address will not be published. Required fields are marked *