Share this news

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಬಗ್ಗೆ ಮರು ತನಿಖೆಗೆ ನಿರ್ಧಾರ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡಲು ನಿರ್ಧರಿಸಿದ್ದೇವೆ. ಬಿಟ್ ಕಾಯಿನ್ ಹಗರಣದ ಬಗ್ಗೆ ಮರುಪರಿಶೀಲನೆ ಮಾಡುತ್ತೇವೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದು 20 ಆಗಿದೆ ಅಷ್ಟೇ, ಬಿಜೆಪಿಯವರು ಸ್ವಲ್ಪ ಸಮಧಾನವಾಗಿದ್ದರೆ ಒಳ್ಳೆಯದರು ಎಂದರು.

2021 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡಿತ್ತು. ಬಳಿಕ ಹಗರಣದ ಬಗ್ಗೆ ನಾನಾ ತನಿಖೆಗಳೂ ಸಹ ನಡೆದಿದ್ದವು . ಇದೀಗ ಮತ್ತೆ ಬಿಟ್ ಕಾಯಿನ್ ಪ್ರಕರಣವನ್ನು ಮರುಪರಿಶೀಲನೆ ಮಾಡಲಾಗುವುದು ಎಂದುಹೇಳಿದ್ದಾರೆ.

ಬಿಟ್‌ಕಾಯಿನ್ ಎನ್ನುವುದು 2009 ರಲ್ಲಿ ರಚಿಸಲಾದ ಡಿಜಿಟಲ್ ಕರೆನ್ಸಿಯಾಗಿದೆ.  ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬಿಟ್ ಕಾಯಿನ್ ಅಂದ್ರೆ ಕಣ್ಣಿಗೆ ಕಾಣಲ್ಲ. ಅದೊಂದು ಡಿಜಿಟಲ್ ಕರೆನ್ಸಿ. ಇದು ಆನ್‌ಲೈನ್ ಮತ್ತು ಇಟ್ಟಿಗೆ ಮತ್ತು ಗಾರೆ ಖರೀದಿಗೆ ಬಳಸುವ ಸಂಸ್ಕರಿಸಿದ ಡೇಟಾ ಬ್ಲಾಕ್‌ಗಳಿಂದ ಮಾಡಲ್ಪಟ್ಟ ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿದೆ.

 

Leave a Reply

Your email address will not be published. Required fields are marked *