Share this news

ಬೆಂಗಳೂರು: ತಿದ್ದುಪಡಿಗೆ ಅರ್ಜಿಸಲ್ಲಿಸಿದ್ದ 1,17,646 ಬಿಪಿಎಲ್ ಫಲಾನುಭವಿಗಳಿಗೆ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಬಿಪಿಎಲ್ ಕಾರ್ಡ್ಗಳ ತಿದ್ದುಪಡಿಗೆಂದೇ ಒಟ್ಟು 3.18 ಲಕ್ಷ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿನಿAದ ಹೊಸದಾಗಿ ತಿದ್ದಪಡಿಗೆ ಒಟ್ಟು 53219 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಒಟ್ಟು 3 ಲಕ್ಷ 70 ಸಾವಿರ ಅರ್ಜಿಗಳು ತಿದ್ದುಪಡಿಗೆಂದೇ ಸಲ್ಲಿಕೆಯಾಗಿದ್ದವು.ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟು 117646 ಬಿಪಿಎಲ್ ಕಾರ್ಡ್ಗಳ ತಿದ್ದುಪಡಿಗೆ ಅನುಮತಿ ನೀಡಲಾಗಿದೆ. ಇನ್ನು 3.70 ಲಕ್ಷ ಕಾರ್ಡ್ಗಳ ಪೈಕಿ 93362 ಬಿಪಿಎಲ್ ಕಾರ್ಡ್ಗಳ ಅರ್ಜಿ ತಿರಸ್ಕೃತಗೊಂಡಿವೆ. ಆಹಾರ ಇಲಾಖೆ ನಿಯಮಾವಳಿಗಳನ್ನು ಮೀರಿ ತಿದ್ದುಪಡಿಗೆ ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿವೆ.

ತಿದ್ದಪಡಿಯಲ್ಲಿ ಹೆಸರು ಬದಲಾವಣೆ ಹಾಗೂ ಹೊಸ ಫಲಾನುಭವಿಗಳ ಹೆಸರು ಸೇರಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ತಿದ್ದುಪಡಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಒಟ್ಟು 117646 ಅರ್ಜಿಗಳ ತಿದ್ದುಪಡಿಗೆ ಅನುಮತಿ ನೀಡಿದ್ದಾರೆ. ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ಇತ್ತೀಚೆಗೆ ತಿಳಿಸಿದ್ದವು. ಇದರ ಬೆನ್ನಲ್ಲೇ ತಿದ್ದುಪಡಿ ಅರ್ಜಿಗಳಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

Leave a Reply

Your email address will not be published. Required fields are marked *