Share this news

ನವದೆಹಲಿ: ದೇಶದೆಲ್ಲೆಡೆ ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಯ ಬಗ್ಗೆ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ಕೆಲವರು ಇನ್ನೂ ರಾಮ ಮಂದಿರದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ, ಇಡೀ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ.
ಬಿಹಾರದಲ್ಲಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಭೆಯೊಂದರಲ್ಲಿ ರಾಮ ಮಂದಿರದ ಬಗ್ಗೆ ಪ್ರಶ್ನೆ ಮಾಡುತ್ತಾ, ಇಡೀ ಸಮಾರಂಭದ ಬಗ್ಗೆ ಲೇವಡಿ ಮಾಡುತ್ತಿದ್ದರು. ರಾಮ ಮಂದಿರದ ರಚನೆಯ ಬಗ್ಗೆ, ರಾಮನ ಅಸ್ತಿತ್ವದ ಕುರಿತು ಈತ ಪ್ರಶ್ನೆ ಮಾಡುತ್ತಿರುವಾಗಲೇ,ಇಡೀ ವೇದಿಕೆಯೇ ಕಾಕತಾಳೀಯ ಎಂಬಂತೆ ಕುಸಿದು ಬಿದ್ದಿದೆ. ಪಸ್ಮಾಂಡ ವಂಚಿತ್ ಮಹಾಸಂಘಟನ್‌ ಜನವರಿ 18 ರಂದು ಶುಕ್ರವಾರ ಗಯಾದ ಅಟಾರಿ ಬ್ಲಾಕ್‌ನ ದಿಹುರಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ವಾರ್ಷಿಕೋತ್ಸವದ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಪಸ್ಮಾಂಡ ವಂಚಿತ್‌ ಮಹಾಸಂಘಟನ್‌ನ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಅಲಿ ಅನ್ವರ್‌ ಅನ್ಸಾರಿ ಮಾತನಾಡುತ್ತಿದ್ದರು. ಭಗವಾನ್‌ ಶ್ರೀರಾಮನ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವಿಚಾರವನ್ನು ಗೇಲಿ ಮಾಡುವಾಗಲೇ ಏಕಾಎಕಿ ಇಡೀ ವೇದಿಕೆ ಇಸ್ಪೀಟ್‌ನ ಎಲೆಗಳ ರೀತಿ ಉದುರಿಬಿದ್ದಿದೆ. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಎಲ್ಲರೂ ನೆಲಕ್ಕೆ ಬಿದ್ದಿದ್ದಾರೆ. ವೇದಿಕೆಯಿಂದ ಬೀಳುವಾಗ ಮಾಜಿ ಸಂಸದ ಹಾಗೂ ಪಸ್ಮಾಂಡ ವಂಚಿತ್‌ ಮಹಾಸಂಘಟನ್‌ನ ರಾಷ್ಟ್ರೀಯ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ಅವರ ಕಾಲಿಗೆ ತೀವ್ರ ಗಾಯವಾಗಿದೆ.
ವೇದಿಕೆ ಕುಸಿದು ಬೀಳುವುದಕ್ಕೂ ಮುನ್ನ ಮಾತನಾಡಿದ ಅಲಿ ಅನ್ವರ್‌ ಅನ್ಸಾರಿ, ವೇದಿಕೆ ಕುಸಿದು ಬೀಳುತ್ತದೆಯೇ ಇಲ್ಲವೇ ಎಂದು ನಾನು ಇಲ್ಲಿಗೆ ಬರುವ ಮುನ್ನವೇ ಕೇಳಿದ್ದೆ. ಆದರೆ, ವೇದಿಕೆ ಮುರಿದು ಬೀಳುವುದಿಲ್ಲ ಎಂದು ತುಂಬಾ ಜನ ಹೇಳಿದ್ದರು. ಆದರೆ, ಈ ಚಳಿಯಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಾಗಲೇ ಇಡೀ ವೇದಿಕೆ ಕುಸಿದು ಬಿದ್ದಿದೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಡೀ ವೇದಿಕೆ ಕುಸಿದು ಬಿದ್ದ ಬಳಿಕ, ಮೈದಾನದಲ್ಲಿ ಮೇಜು ಇಟ್ಟು ಸಭೆಯನ್ನು ಮುಂದುವರಿಸಲಾಗಿದೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *