ಬೆಂಗಳೂರು: ಕ್ಯಾಬ್ ಹಾಗೂ ಆಟೋ ಚಾಲಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ.
ನಗರದ ಹಲವೆಡೆ ಸೋಮವಾರ ಮುಂಜಾನೆಯಿಂದಲೇ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನಕಾರರು ಬೀದಿಗಿಳಿದು ಟಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ ಈ ಕೂಡಲೇ ನಮ್ಮ ಮನವಿಯನ್ನು ಪರಿಗಣಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಹಲವೆಡೆ ಆಟೋ ಚಾಲಕರು ಹಾಗೂ ಸಾರಿಗೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ನಗರದ ಹಲವೆಡೆ ಓಡಾಡುತ್ತಿರುವ ಖಾಸಗಿ ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ, ಮೊಟ್ಟೆ ತೂರಾಟ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಾರಿಗೆ ಕಲ್ಲು ತೂರಲಾಗಿದೆ. ಆಟೋ-ಕ್ಯಾಬ್ ಸಿಗದೆ ಜನರ ಪರದಾಟ ನಡೆಸುತ್ತಿದ್ದು, ಹಲವು ಮಂದಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಾಗಿ ಪರದಾಡುತ್ತಿದ್ದಾರೆ. ಈ ನಡುವೆ ಇಲಾಖೆ ಕೂಡ ಹೆಚ್ಚುವರಿ ಬಸ್‌ಗಳನ್ನು ಸಂಚಾರ ಮಾಡುವುದಾಗಿ ತಿಳಿಸಿದೆ.