ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರ್ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯನ್ನು ಹತ್ಯೆ ಮಾಡಿ, ಶವವನ್ನು ಸ್ಕೂಟೇಸ್ ನಲ್ಲಿ ಠಾಣೆಗೆ ತಂದ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಸೋನಾಲಿ ,ತನ್ನ ಅತ್ತೆ ಹಾಗೂ ತಾಯಿ ಬೀವಪಾಲ್ ಜತೆ ವಾಸವಾಗಿದ್ದರು. ತಾಯಿ ಬೀವಪಾಲ್ ಹಾಗೂ ಅತ್ತೆಯ ನಡುವೆ ನಿತ್ಯ ಜಗಳದಿಂದ ಬೇಸತ್ತಿದ್ದ ಸೋನಾಲಿ (39) ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ಸೂಟ್ಕೇಸ್ ನಲ್ಲಿ ಶವವನ್ನು ಠಾಣೆಗೆ ತಂದಿದ್ದಾಳೆ.
ನಿನ್ನೆ ರಾತ್ರಿ ಜಗಳವಾಗಿದ್ದು, ಜಗಳದ ಬಳಿಕ ತಾಯಿ ಬೀವಾಪಲ್ (78) ನಿದ್ದೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದು, ಮುಂಜಾನೆ ತಾಯಿಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿದ್ದಾಳೆ. ಬಳಿಕ ಟ್ರ್ಯಾಲಿ ಸೂಟ್ಕೇಸ್ ನಲ್ಲಿ ತಾಯಿಯ ಶವದ ಜೊತೆಗೆ ತಂದೆಯ ಫೋಟೋ ಇಟ್ಟುಕೊಂಡು ಠಾಣೆಗೆ ಬಂದಿದ್ದಾಳೆ. ಸದ್ಯ ಮೈಕೋ ಲೇಔಟ್ ಠಾಣೆ ಪೊಲೀಸರು ಸೋನಾಲಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.