ಬೆಂಗಳೂರು: ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಿಗೆ ನಾಡ ಪಿಸ್ತೂಲ್ ಸಪ್ಲೈ ಮಾಡಿದವನನ್ನು ಸಿಸಿಬಿ ಪತ್ತೆ ಮಾಡಿದೆ. ಜುನೈದ್ ಅಣತಿಯಂತೆ ರಬ್ಬಾನಿಗೆ ಪಿಸ್ತೂಲ್ ನೀಡಿದ್ದವನ ಜಾಡು ಪತ್ತೆ ಮಾಡಿದ್ದು, ತುಮಕೂರು ರಸ್ತೆಯ ಟಿ ಬೇಗೂರಿನಲ್ಲಿ ಸಲ್ಮಾನ್ ಎಂಬಾತ ರಬ್ಬಾನಿಗೆ ಪಿಸ್ತೂಲ್ ಸಪ್ಲೈ ಮಾಡಿದ್ದಾನೆ ಎನ್ನುವ ಸಿಸಿಬಿಗೆ ಮಾಹಿತಿ ಸಿಕ್ಕಿದೆ.
ಗನ್ ಸಪ್ಲೈ ಮಾಡಿದ ಸಲ್ಮಾನ್ ಈ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೀಗ ಈತ ಸಹ ನೇಪಾಳ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ವಿದೇಶದಿಂದ ಫಂಡಿAಗ್ ಆಗಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಸಿಸಿಬಿ, ಬಂಧಿತ ಶಂಕಿತ ಉಗ್ರರಾದ ಸುಹೈಲ್ , ತಬ್ರೇಜ್, ರಬ್ಬಾನಿ, ಮುದಾಸಿರ್ , ಉಮರ್ ಸೇರಿದಂತೆ ಕುಟುಂಬಸ್ಥರ ಸುಮಾರು 40ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್‌ಗಳನ್ನು ಸಿಸಿಬಿ ಪರಿಶೀಲನೆ ನಡೆಸಿದ್ದಾರೆ. ಪ್ರಮುಖ ಆರೋಪಿ ಜುನೈದ್, ವಿದೇಶದಲ್ಲಿ ಕುಳಿತುಕೊಂಡು ಶಂಕಿತರ ಅಕೌಂಟ್‌ಗಳಿಗೆ ಹಣ ಹಾಕಿಸಿರುವ ಅನುಮಾನದ ಮೇಲೆ ಶಂಕಿತರ ಉಗರು ಹಾಗೂ ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಂ1 ಆರೋಪಿ ಟಿ ನಜೀರ್‌ನನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಜುನೈದ್ ಮೂಲಕ ಭಯೋತ್ಪಾದಕ ಚಟುವಟಿಕೆಗಳು ಮಾಡಿಸಿರುವ ಆರೋಪ ಮೇಲೆ ಬಾಡಿ ವಾರೆಂಟ್ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ನಜೀರ್ ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು, ವಿಚಾರಣೆ ಮಾಡಿ ಮಾಹಿತಿ ಕಲೆಹಾಕಲಿದ್ದಾರೆ.