ಮೂಡುಬಿದಿರೆ: ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿದ್ದ ಬಿದ್ದ ಪರಿಣಾಮ ತೋಟದಲ್ಲಿ ಮೇಯಲು ಬಿಟ್ಟಿದ್ದ ಗಬ್ಬದ ದನವೊಂದು ವಿದ್ಯುತ್ ಆಘಾತದಿಂದ ದಾರುಣವಾಗಿ ಮೃತಪಟ್ಟ ಘಟನೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಸಮೀಪದ ಮಿತ್ತ ಅಣೆಬೆಟ್ಟು ಎಂಬಲ್ಲಿ ಸಂಭವಿಸಿದೆ.
ಭಾನುವಾರ ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು ಗಂಗಾಧರ ಪೂಜಾರಿಯವರಿಗೆ ಸೇರಿದ್ದ ದನ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದೆ.ಗಂಗಾಧರ ಪೂಜಾರಿಯವರು ಬೆಳಗ್ಗೆ ಮೇಯಲು ತಮ್ಮ ದನವನ್ನು ತೋಟದಲ್ಲಿ ಬಿಟ್ಟಿದ್ದರು. ಇದೇ ಸ್ಥಳದಲ್ಲಿ 11 ಕೆವಿ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ಹಾದುಹೋಗಿದ್ದು, ಏಕಾಎಕಿ ವಿದ್ಯುತ್ ವಯರ್ ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ದನ ಸುಟ್ಟು ಕರಕಲಾಗಿದೆ. ವಿದ್ಯುತ್ ತಂತಿ ಬಿದ್ದ ಸ್ಥಳದಲ್ಲಿ ಹಲವಾರು ಮೀಟರ್ ಜಾಗದ ಹುಲ್ಲು ಗಿಡಗಂಟಿಗಳು ಸುಟ್ಟಿದ್ದು ವಿದ್ಯುತ್ ಅವಘಡಕ್ಕೆ ಸಾಕ್ಷಿಯಾಗಿದೆ.ಹಳೆಯದಾದ ತುಕ್ಕುಹಿಡಿದ ತಂತಿಗಳನ್ನು ಬದಲಾಯಿಸದೇ ಈ ದುರ್ಘಟನೆ ಸಂಭವಿಸಿದ್ದು ಇದಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿಂದೆ ಇದೇ ಪರಿಸರದಲ್ಲಿ ಕೀರ್ತಿ ಪೂಜಾರಿ (27)ವಿದ್ಯುತ್ ಅವಘಡದಿಂದ ದಾರುಣ ಸಾವನ್ನಪ್ಪಿದ್ದರು. ಜನಸಂಚಾರವಿರುವ ಈ ಪರಿಸರದಲ್ಲಿನ ವಿದ್ಯುತ್ ಲೈನ್ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪದೇಪದೇ ವಿದ್ಯುತ್ ಅವಘಡಗಳು ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಇನ್ನಾದರೂ ವಿದ್ಯುತ್ ಲೈನ್ ಬೇರೆಡೆಗೆ ಸ್ಥಳಾಂತರಗೊಳಿಸಬೇಕೆAದು ಜನರು ಒತ್ತಾಯಿಸಿದ್ದಾರೆ.




