ಮೂಡುಬಿದಿರೆ: ಸಮಾಜದಲ್ಲಿ ಜಾತಿ, ಮತ, ಪಂತ ಪ್ರಾಂತ, ಮೇಲು, ಕೀಲುಗಳೆಂಬ ಭೇದವಿಲ್ಲದೆ ಒಂದಾಗಿ ಬಾಳಬೇಕೆಂದು ಜಾಗ್ರತಾವಸ್ಥೆಗೆ ಬರಬೇಕೆಂದು ಇಂತಹ ಉತ್ಸವ ಮಾಡುತ್ತೇವೆ. ಕಷ್ಟದಲ್ಲಿರುವವರ ಜೊತೆ ನಾವು ಸಹಕಾರಿಗಳಾಗಬೇಕಾದರೆ ಹರೆಯದ ಮನಸ್ಸುಗಳು ಒಂದಾಗಬೇಕು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಬೆಳುವಾಯಿಯ ಯುವಶಕ್ತಿ ವಾಟ್ಸಾಪ್ ಬಳಗದ ಹತ್ತನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಹತ್ತು ಯುವ ಮನಸ್ಸುಗಳು ಏಕಮಾರ್ಗದಲ್ಲಿ ಸಾಗಬೇಕಾದರೆ ಬ್ರಹ್ಮ ರಥದ ಹಗ್ಗಕ್ಕೆ ಕೈಕೊಟ್ಟು ಎಳೆದಾಗ ದೇವರ ಮೇಲಿನ ನಂಬಿಕೆ ಭಕ್ತಿ ಇಮ್ಮಡಿಯಾಗುತ್ತೆ ಎಂದರು.
ಉಪನ್ಯಾಸಕ, ಕಲಾವಿದ ಡಾ. ವಾದಿರಾಜ ಕಲ್ಲೂರಾಯ ಸಮಾಜದಲ್ಲಿ ಯುವಶಕ್ತಿಯ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಕಲಾವಿದ ಕಾಂತಾವರ ಮಹಾವೀರ ಪಾಂಡಿಯವರಿಗೆ ಯುವಶಕ್ತಿ ಕಲಾ ಪ್ರಶಸ್ತಿ, ಹೂವಿನ ವ್ಯಾಪಾರಿ ಸತೀಶ್ ಶೆಟ್ಟಿಗಾರರಿಗೆ ಸನ್ಮಾನ, ಹಾಗೂ ಪ್ರತಿಭಾನ್ವಿತ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ಮಾಡಲಾಯಿತು.
ಕಲಾವಿದ ಎಂ ದೇವಾನಂದ ಭಟ್ ಸಂಸ್ಥೆ ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ನಿರಂಜನ ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅದ್ಯಕ್ಷ ಸರೇಶ್ ಕೆ. ಪೂಜಾರಿ, ಉಪಾಧ್ಯಕ್ಷೆ ಜಯಂತಿ, ಯುವಶಕ್ತಿ ವಾಟ್ಸಾಪ್ ಬಳಗದ ಸಂಚಾಲಕ ಸಂದೇಶ್ ಭಂಡಾರಿ, ರವೀಂದ್ರ ಪೂಜಾರಿ, ಗಂಗಾದರ ಪೂಜಾರಿ, ಹರೀಶ್ ಬಂಗೇರ, ಚಂದ್ರಹಾಸ ಜೈನ್, ನಿತಿನ್, ವೈಶಾಕ್ ಜೈನ್, ಶ್ರೀರಾಜ್ ಕನ್ನಡ, ಸುದರ್ಶನ್ ಆಚಾರ್ಯ, ಅಣ್ಣಿ ಬಿ. ಪೂಜಾರಿ ಉಪಸ್ಥಿತರಿದ್ದರು.
ಬೆಳುವಾಯಿ ಹರಿಪ್ರಸಾದ್ ರಾವ್ ಸ್ವಾಗತಿದರು. ಗಣೇಶ್ ಬಿ ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಖ್ಯಾತ ಕಲಾವಿದರಿಂದ ಭೃಗು ಲಾಂಛನ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಜರಗಿತು.
