ಕಾರ್ಕಳ: ರಸ್ತೆಗಳಿಗೆ ಬಾಗಿರುವ ಹಳೆಯ ಮರಗಳ ಕೊಂಬೆಗಳು ಮಳೆಗಾಲದಲ್ಲಿ ಗಾಳಿ ಮಳೆಗೆ ಮುರಿದುಬೀಳುವ ಸ್ಥಿತಿಯಲ್ಲಿದ್ದರೂ ಅರಣ್ಯ ಇಲಾಖೆ ಮಾತ್ರ ಈ ಕುರಿತು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
ಈಗಾಗಲೇ ಕಳೆದ ವಾರ ಕಾರ್ಕಳ ತಾಲೂಕಿನ ಬೆಳ್ಮಣ್ಣು ಪೇಟೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಹಳೆಯದಾದ ಮರಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದರೂ ಅರಣ್ಯ ಇಲಾಖೆ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಮರಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಮುಂದಾಗಿಲ್ಲ.ಪ್ರಮುಖ ಹೆದ್ದಾರಿಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ ತೋರಿದೆ.ಅರಣ್ಯ ಇಲಾಖೆ ಹಾಗೂ ಸ್ಥಳೀಯಾಡಳಿತಗಳ ಸಹಕಾರ ಪಡೆದುಕೊಂಡು ಅಮಾಯಕರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯದಕ್ಷತೆ ಪ್ರದರ್ಶಿಸಬೇಕಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಲು ತಾಂತ್ರಿಕ ತೊಡಕುಗಳನ್ನು ಮುಂದಿಟ್ಟುಕೊAಡು ಅಪಾಯಕಾರಿ ಮರಗಳನ್ನು ಕಡಿಯಲು ವಿಳಂಬಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮನುಷ್ಯನ ಪ್ರಾಣ ರಕ್ಷಣೆ ಎಲ್ಲಾ ಕಾನೂನುಗಳಿಗಿಂತಲೂ ಮುಖ್ಯ, ಅಧಿಕಾರಿಗಳು ಕಾನೂನು ಬದಿಗಿಟ್ಟು ಜನಪರ ಕಾಳಜಿಯಿಂದ ರಸ್ತೆಗೆ ಬಾಗಿರುವ ಅಪಾಯಕಾರಿ ಮರಗಳನ್ನು ಹಾಗೂ ಕೊಂಬೆಗಳನ್ನು ತೆರವುಗೊಳಿಸಿ ಇನ್ನಷ್ಟು ಅಮಾಯಕ ವಾಹನ ಸವಾರರ ಪ್ರಾಣ ರಕ್ಷಿಸಬೇಕಿದೆ