ಕಾರ್ಕಳ,: ಅವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳಣ್ ನ ಜಂತ್ರದಲ್ಲಿ ನಡೆದಿದೆ.ಜಂತ್ರ ನಿವಾಸಿ ಸಂತೋಷ ಆಚಾರ್ಯ (41) ಮೃತ ದುರ್ದೈವಿ.
ಸಂತೋಷರವರು ಸುಮಾರು 10 ವರ್ಷದಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿ ಸೋಮವಾರ ಮಧ್ಯಾಹ್ನ ವಾಸದ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ