ಕಾರ್ಕಳ : ಕ್ರಶರ್ನಲ್ಲಿ ಟಿಪ್ಪರ್ ಗೆ ಜಲ್ಲಿ ತುಂಬಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಟಿಪ್ಪರ್ನಿಂದು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ನಲ್ಲಿ ಫೆ.22ರಂದು ನಡೆದಿದೆ.
ಬೆಳ್ಮಣ್ನಲ್ಲಿರುವ ನಿತ್ಯಾನಂದ ಶೆಟ್ಟಿ ಎಂಬವರ ಮಾಲಕತ್ವದ ದುರ್ಗಾ ಕ್ರಶರ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಟಿಪ್ಪರ್ ಚಾಲಕ ರವಿ ಟಿಪ್ಪರ್ನ ಬಂಕರ್ನಿAದ ಜಲ್ಲಿಯನ್ನು ಲೋಡ್ ಮಾಡುತ್ತಿದ್ದಾಗ ಕ್ರಶರ್ನಲ್ಲಿ ಕೆಲಸ ಮಾಡುತ್ತಿದ್ದ ಸಾವ್ಕಾರ್ ಬಾರೋ ಎಂಬಾತ ಟಿಪ್ಪರ್ನ ಮೇಲೆ ಹತ್ತಿ ಜಲ್ಲಿಯನ್ನು ಲೆವೆಲ್ ಮಾಡುತ್ತಿದ್ದ.
ಈ ವೇಳೆ ಕ್ರಶರ್ ಮಾಲೀಕ ನಿತ್ಯಾನಂದ ಶೆಟ್ಟಿ ಹಾಗೂ ಟಿಪ್ಪರ್ ಚಾಲಕ ರವಿ ಅವರ ಅಜಾಗರೂಕತೆಯಿಂದಾಗಿ ಸಾವ್ಕಾರ್ ಆಯತಪ್ಪಿ ಟಿಪ್ಪರ್ನಿಂದ ಕೆಳಗೆ ಪಿಲ್ಲರ್ನ ಮಧ್ಯದಲ್ಲಿರುವ ಕಲ್ಲಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.