Share this news

ಉಡುಪಿ: ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಎಂಬಲ್ಲಿ ಭಾನುವಾರ ಸಂಜೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಮುಗುಚಿಬಿದ್ದ ಪರಿಣಾಮ ಇಬ್ಬರು ಮೀನುಗಾರರು ಸಮುದ್ರಪಾಲಾಗಿದ್ದರು. ಇದೀಗ ಸಮುದ್ರಪಾಲಾಗಿದ್ದ ಇಬ್ಬರು ಮೀನುಗಾರರ ಮೃತದೇಹವು ಸೋಮವಾರ ಪತ್ತೆಯಾಗಿದೆ.

ದೋಣಿ ಮಗುಚಿ ಬಿದ್ದ 300 ಮೀಟರ್ ವ್ಯಾಪ್ತಿಯಲ್ಲಿ ಗಂಗೊಳ್ಳಿಯ ಮುಸ್ತಫಾ ಅವರ ಪುತ್ರ ಮುಹಮ್ಮದ್ ಮುಸಾಬ್(22) ಮೃತದೇಹವು ಸೋಮವಾರ ನಸುಕಿನ ವೇಳೆ ಸುಮಾರು 1.30ಕ್ಕೆ ಮತ್ತು ಬಾವು ನೂರುಲ್ ಅಮೀನ್ ಅವರ ಪುತ್ರ ನಝಾನ್ (24) ಅವರ ಮೃತದೇಹವು ನಸುಕಿನ ವೇಳೆ 2.45ರ ಸುಮಾರಿಗೆ ದೊರೆತಿದೆ.

ಇವರು ಅಲ್ಜಿ ಮುಹಮ್ಮದ್ ಯಾಸೀನ್, ಸಾರಾಂಗ್ ಮುಸ್ತಾಕ್ ಎಂಬವರೊಂದಿಗೆ ಸೇರಿಕೊಂಡು ಕೈರಂಪಣಿ ಬಲೆಯನ್ನು ಹಾಕಿ ಮೀನುಗಾರಿಕೆ ಮಾಡಲು ಶಿರೂರು ಗ್ರಾಮದ ಅಳಿವೆಗದ್ದೆ ಕಿರು ಬಂದರಿಗೆ ತೆರಳಿದ್ದು, ಅಲ್ಲಿ ಮುಸಾಬ್ ಹಾಗೂ ನಝಾನ್, ಕುರ್ಡಿ ಸಾಧಿಕ್ ಎಂಬವರ ಸೈಫಾ ಎಂಬ ದೋಣಿಯಲ್ಲಿ ಮೀನುಗಾರಿಕೆ ನಡೆಸಲು ಸಮುದ್ರ ತೀರದಿಂದ ಸುಮಾರು 100 ಮೀಟರ್ ದೂರ ಹೋಗಿದ್ದರು.ಸಮುದ್ರದಲ್ಲಿ ಬಲೆಯನ್ನು ಬಿಡುತ್ತಿರುವಾಗ ದೋಣಿಯು ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿತ್ತೆನ್ನಲಾಗಿದೆ.ಇದರಿಂದಾಗಿ ದೋಣಿಯಲ್ಲಿದ್ದ ಇವರಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ಸ್ಥಳಕ್ಕೆ ಬೈಂದೂರು ಎಸ್ಸೈ ನಿರಂಜನ ಗೌಡ, ಅಗ್ನಿಶಾಮಕದಳ, ಕರಾವಳಿ ಕಾವಲುಪಡೆ ಪೊಲೀಸರು,ಬೈಂದೂರು ತಹಶೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *