ಬೆಂಗಳೂರಲ್ಲಿ: ಬೆಂಗಳೂರಿನಲ್ಲಿ ದೆಹಲಿ ಮಾದರಿಯ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್ ಸವಾರನೊಬ್ಬ ಅಮಾನವೀಯ ಕೃತ್ಯ ಎಸಗಿರುವ ಘಟನೆ ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಸುಮಾರು 1 ಕಿ.ಮೀ ದೂರದಷ್ಟು ವಯಸ್ಸಾದ ವ್ಯಕ್ತಿಯನ್ನು ಸ್ಕೂಟಿಯಲ್ಲಿ ಎಳೆದೊಯ್ದು ಪೈಶಾಚಿಕ ಕೃತ್ಯ ಎಸಗಿದ್ದಾನೆ.
ಇದಕ್ಕೂ ಮೊದಲು ರಾಂಗ್ ರೂಟ್‌ನಲ್ಲಿ ಬಂದಿದ್ದ ಬೈಕ್ ಸವಾರ, ಟಾಟಾ ಸುಮೋಗೆ ಹಿಂದೆಯಿಂದ ಬಂದು ಗುದ್ದಿದ್ದಾನೆ. ಟಾಟಾ ಸುಮೋಗೆ ಯಾಕೆ ಗುದ್ದಿದ್ದೀಯ ಎಂದು ಚಾಲಕ ಕೇಳಿದ್ದಾನೆ. ಈ ವೇಳೆ ಟಾಟಾ ಸುಮೋ ಚಾಲಕ ಹಾಗೂ ಬೈಕ್ ಸವಾರನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ತದನಂತರ ಬೈಕ್ ಸವಾರ ಏಕಾಏಕಿ ಬೈಕ್ ತೆಗೆದುಕೊಂಡು ಹೊರಟಿದ್ದಾನೆ. ಈ ವೇಳೆ ಟಾಟಾ ಸುಮೋ ಚಾಲಕ ಬೈಕ್ ಹಿಡಿದುಕೊಂಡು ಹೋಗಿದ್ದಾನೆ. ವಯಸ್ಸಾದ ವ್ಯಕ್ತಿಯನ್ನ ನಡು ರಸ್ತೆಯಲ್ಲಿ ಎಳೆದೊಯ್ದಿದ್ದಾನೆ.
ಕೊನೆಗೂ ಸಾರ್ವಜನಿಕರು ಬೈಕ್ ತಡೆದು ಬೈಕ್ ಸವಾರನನ್ನು ತಡೆದು. ಹಿಗ್ಗಾಮುಗ್ಗ ಥಳಿಸಿದ್ದಾರೆ. ಚಾಲಕನ ಕೈ-ಕಾಲು ಸಂಪೂರ್ಣ ತೆರಚಿ ಹೋಗಿದೆ. ತಕ್ಷಣವೇ ಪೊಲೀಸರು ಆಂಬ್ಯುಲೆನ್ಸ್‌ನಲ್ಲಿ ಗಾಯಾಳು ಚಾಲಕ ಹಾಗೂ ಬೈಕ್ ಸವಾರ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಾತನಾಡಿದ ಕಾರು ಚಾಲಕ ಮುತ್ತಪ್ಪ, ನನ್ನ ವಾಹನಕ್ಕೆ ಹಿಂದೆಯಿಂದ ಬಂದು ಆತ ಗುದ್ದಿದ. ಯಾಕೆ ನನ್ನ ವಾಹನಕ್ಕೆ ಗುದ್ದಿದ್ದಿಯ ಎಂದು ಕೇಳಿದೆ. ಅವನು ಏನೂ ಮಾತನಾಡದೇ ಪರಾರಿಯಾಗಲು ಯತ್ನಿಸಿದ, ಆಗ ನಾನು ಆತನ ಬೈಕ್ ಅನ್ನು ಹಿಡಿದುಕೊಂಡು ಹೋದೆ. ಸುಮಾರು 1 ಕಿ.ಮೀ ನನ್ನ ಬೈಕ್‌ನಲ್ಲಿ ಎಳೆದುಕೊಂಡು ಹೋದ. ಬಳಿಕ ಜನರು ಅಡ್ಡ ಹಾಕಿ ಬೈಕ್ ಸವಾರನನ್ನು ತಡೆದರು. ಬಳಿಕ ಸ್ಥಳದಲ್ಲೇ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಥಳಿಸಿದರು. ಕೂಡಲೇ ನನ್ನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದರು. ನನ್ನ ಸೊಂಟ, ಕಾಲು, ಕೈಗೆ ಗಾಯಗಳು ಆಗಿವೆ ಎಂದು ಕಾರು ಚಾಲಕ ಮುತ್ತಪ್ಪ ಹೇಳಿದರು.