ಕಾರ್ಕಳ: ಬೈಲೂರು ಪರಶುರಾಮ ಥೀಮ್ ಪಾರ್ಕ್ ಸಮೀಪದ ಬಸ್ರಿಬೈಲೂರು ಶಾಲೆಯ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರು ಬಸ್ರಿಬೈಲೂರು ಬಳಿ ಏಕಾಎಕಿ ಚಾಲಕನ ನಿಯಂತ್ರಣತಪ್ಪಿ ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಬಡಿದಿದೆ. ಅಪಘಾತದ ರಭಸಕ್ಕೆ ಕಾರು ವಿದ್ಯುತ್ ಕಂಬವನ್ನು 10 ಅಡಿಯಷ್ಟು ಎಳೆದುಕೊಂಡು ಹೋಗಿದ್ದು ಅಪಘಾತದ ರಭಸಕ್ಕೆ ಏರ್ ಬಾಗ್ ತೆರೆದುಕೊಂಡಿದ್ದು ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೇ ಬಚಾವ್ ಆಗಿದ್ದಾರೆ.