ಕಾರ್ಕಳ; ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಶೈಕ್ಷಣಿಕವಾಗಿ ಸಂಯೋಜನೆಗೊAಡ ಕಾರ್ಕಳ ತಾಲೂಕಿನ ಬೈಲೂರು ನಚಿಕೇತ ವಿದ್ಯಾಲಯಕ್ಕೆ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ನಚಿಕೇತ ಮಾತೃಭಾರತಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ನಚಿಕೇತ ವಿದ್ಯಾಲಯದ ಅಧ್ಯಕ್ಷ ಡಿ.ಮಚ್ಛೇಂದ್ರನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಬದಲ್ಲಿ ಪೋಷಕ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿಮಯ್ಯ ಮಾತಾಜಿ ಉಪಸ್ಥಿತರಿದ್ದರು.
ಮಾತೃಭಾರತಿಯ ಅಧ್ಯಕ್ಷೆಯಾಗಿ ದೀಕ್ಷಿತಾ ರಾವ್ , ಉಪಾಧ್ಯಕ್ಷೆಯಾಗಿ ವಿದ್ಯಾ ಪೈ , ಕಾರ್ಯದರ್ಶಿಯಾಗಿ ಸ್ನೇಹಲತಾ ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ ಶಾಲಿನಿ ಸುಕೇಶ್, ಜಯಲಕ್ಷ್ಮಿಜಗದೀಶ್, ಶ್ರೀಮತಿ ಭಾರತಿ, ಅಂಜಲಿ ಮೋಹನ್, ಸರಿತಾ, ಮಾಲಿನಿ ಶೆಟ್ಟಿ, ಸೌಮ್ಯ ಬಂಗೇರ, ಪಾರ್ವತಿ, ಶಶಿರೇಖಾ ಹಾಗೂ ಸೌಮ್ಯ ಆಯ್ಕೆಯಾಗಿದ್ದಾರೆ.
ಸೌಮ್ಯ ಮಾತಾಜಿ ಸ್ವಾಗತಿಸಿ, ಮಾಲತಿ ಮಾತಾಜಿ ವಂದಿಸಿದರು. ಪ್ರತಿಮಾ ಮಾತಾಜಿ ನಿರೂಪಿಸಿದರು.