ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಅಂಗವಾಗಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಪ್ರಾಯೋಜಕತ್ವದಲ್ಲಿ ಸೈಬರ್ ಕ್ರೈಮ್ ಕುರಿತು ಮಾಹಿತಿ ಶಿಬಿರವು ನಾಳೆ ನ.4 ರಂದು ಶನಿವಾರ ಬೈಲೂರುಸ ರಕಾರಿ ಪದವಿ ಪೂರ್ವ ಕಾಲೇಜಿನ ಹಾಲ್ಡಿನ್ ಗ್ಲಾಸ್ ಸಭಾಂಗಣದಲ್ಲಿ ಬೆ 10 ಘಂಟೆಗೆ ನಡೆಯಲಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜಿಲ್ಲಾ ರಜತ ಮಹೋತ್ಸವ ಸಮಿತಿ ಸಂಚಾಲಕಮೊಹಮ್ಮದ್ ಶರೀಫ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,, ಜೆ. ಸುಧೀರ್ ಹೆಗ್ಡೆ ಬೈಲೂರು , ಸಂತೋಷ್ ವಾಗ್ಳೆ, ಲಯನ್ಸ್ ಗವರ್ನರ್ ಡಾ. ಮೇರಿ ಕರ್ನಾಲಿಯೋ, ಲಯನ್ಸ್ ಕ್ಲಬ್ ನೀರೆ-ಬೈಲೂರು ಅಧ್ಯಕ್ಷ ಕೆ. ಸುಜಯ್ ಜತ್ತನ್ನ ,ಧ್ವನಿ ಬೆಳಕು ಸಂಯೋಜಕರ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಧರ್ಮರಾಜ್ ಕುಮಾರ್,ಸ.ಪ.ಪೂ ಕಾಲೇಜು ಪ್ರಾಂಶುಪಾಲಗುರುಮೂರ್ತಿ ಟಿ., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ
ಮಾಲಿನಿ ಜೆ. ಶೆಟ್ಟಿ, ಕಾರ್ಕಳ ನಗರ ಠಾಣೆಯ ಪೋಲೀಸ್ ಉಪನಿರೀಕ್ಷಕ ಸಂದೀಪ್ ಶೆಟ್ಟಿ, ಉಪಸ್ಥಿತರಿರುವರು.
ಉಡುಪಿ ಸೆನ್ ಪೋಲೀಸ್ ಠಾಣೆ ಯ ಉಪನಿರೀಕ್ಷಕ
ಅಶೋಕ್ ಕುಮಾರ್, ಮಣಿಪಾಲ ಪೋಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ ಸಾರ್ವಜನಿಕರು ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ನೀಡಲಿದ್ದಾರೆ