Share this news

ಕಾರ್ಕಳ:ಯರ್ಲಪಾಡಿ ಗ್ರಾಮದ ಬೈಲೂರಿನ ಉಮಿಕಳ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದು ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟ ಪರಿಶೀಲನೆಯ ಬೇಡಿಕೆ ಈಡೇರುವವರೆಗೆ ಸಮಾನ ಮನಸ್ಕ ಹೋರಾಟಗಾರರು ಶನಿವಾರದಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಈ ಹಿಂದೆ ಪ್ರತಿಮೆ ಗುಣಮಟ್ಟದ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಪರಶುರಾಮ ಥೀಮ್ ಪಾರ್ಕಿನಲ್ಲಿ ಒಂದು ದಿನದ ಧರಣಿ ನಡೆಸಿದ್ದರು. ಇತ್ತ ಪ್ರತಿಭಟನೆ ಕೈಬಿಡುವಂತೆ ತಹಶೀಲ್ದಾರ್ ಅನಂತಶAಕರ ಪ್ರತಿಭಟನಾಕಾರರನ್ನು ಮನವಿ ಮಾಡಿದ್ದರು. ಆದರೆ ಪ್ರತಿಮೆ ಗುಣಮಟ್ಟ ಹಾಗೂ ನೈಜತೆ ಪರೀಕ್ಷೆಯ ಭರವಸೆ ನೀಡಿದ ಹೊರತು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಬಿಗಿಪಟ್ಟು ಹಿಡಿದ ಹಿನ್ನಲೆಯಲ್ಲಿ ಕೊನೆಗೂ ತಹಶೀಲ್ದಾರ್ ಅವರು ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದು ಎರಡು ವಾರಗಳ ಕಾಲಾವಾಕಾಶ ಕೋರಿದ್ದರು, ಈ ಹಿನ್ನಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಇದೀಗ ತಮ್ಮ ಮನವಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಶನಿವಾರದಿಂದ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ಶನಿವಾರ ಬೆಳಗ್ಗಿನಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ರಾಮ ನಾಮ ಪಠಿಸುತ್ತಾ ಧರಣಿ ಆರಂಭಿಸಿದ ಪ್ರತಿಭಟನಾನಿರತರು ಪರಶುರಾಮ ವಿಗ್ರಹದ ಗುಣಮಟ್ಟ ಹಾಗೂ ನೈಜತೆಯ ಪರೀಕ್ಷೆ ನಡೆಯುವವರೆಗೂ ನಿರಶನ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಧರಣಿಗೆ ಕುಳಿತಿದ್ದಾರೆ. ಇತ್ತ ಮಧ್ಯಾಹ್ನ ತಹಶೀಲ್ದಾರ್ ಅನಂತಶAಕರ ಧರಣಿಯನ್ನು ಕೈಬಿಡುವಂತೆ ಪ್ರತಿಭಟನಾಕಾರರನ್ನು ಮನವೊಲಿಸಿದರೂ ಫಲಕಾರಿಯಾಗಲಿಲ್ಲ. ಕುರಿತು ನಿರಶನದಲ್ಲಿ ಭಾಗವಹಿಸಿರುವ ಹೋರಾಟಗಾರ ಚಿತ್ತರಂಜನ್ ಶೆಟ್ಟಿ ಮಾತನಾಡಿ, ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಬಗ್ಗೆ ಸಂದೇಹವಿದೆ ಪ್ರಕೃತಿವಿಕೋಪದಿಂದ ಪುತ್ಥಳಿ ಧರಾಶಾಹಿಯಾಗುವ ಸಾಧ್ಯತೆಗಳಿದ್ದು ಇದರಿಂದ ಅಮಾಯಕ ಜನರ ಪ್ರಾಣಕ್ಕೆ ಸಂಚಕಾರ ಎದುರಾಗುವ ಭೀತಿಯಿದೆ ಆದ್ದರಿಂದ ಜನರ ಪ್ರಾಣ ರಕ್ಷಣೆಗೆ ಒತ್ತು ನೀಡುವುದು ತಾಲೂಕು ಆಡಳಿತದ ಹೊಣೆಗಾರಿಕಯಾಗಿದೆ ಎಂದರು.

ಆದರೆ ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ಈ ಯೋಜನೆಯ ಕುರಿತು ನಮ್ಮಲ್ಲಿ ಯಾವುದೇ ಉತ್ತರವಿಲ್ಲ, ಇದು ಜಿಲ್ಲಾಡಳಿತದ ವತಿಯಿಂದ ಕಾರ್ಯಗತವಾಗಿರುವ ಯೋಜನೆಯಾಗಿದ್ದು ಈ ಕುರಿತು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು. ಆದರೆ ಈ ಉತ್ತರಕ್ಕೆ ತೃಪ್ತರಾಗದ ಧರಣಿನಿರತರು ಮಾನವ ಪ್ರಾಣಕ್ಕೆ ಹಾನಿಯಾಗುವ ಸಂದರ್ಭಗಳಿದ್ದಲ್ಲಿ ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳುವುದು ತಾಲೂಕು ಆಡಳಿತದ ಜವಾಬ್ದಾರಿಯಾಗಿದೆ, ಇಂತಹ ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಕಾಯುತ್ತೀರಾ ಎಂದು ಮರುಪ್ರಶ್ನಿಸಿದ್ದು, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ತಹಶೀಲ್ದಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪರಶುರಾಮ ಪುತ್ಥಳಿಯ ನೈಜತೆ ಹಾಗೂ ಗುಣಮಟ್ಟದ ಪರಿಶೀಲನೆಗೆ ಸಲ್ಲಿಸಿರುವ ಮನವಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ, ಇದು ನಿರ್ಮಿತಿ ಕೇಂದ್ರದ ಕಾಮಗಾರಿಯಾಗಿದ್ದು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಈ ಕುರಿತು ಕ್ರಮ ಜರುಗಿಸಬೇಕಿದೆ, ನೈಜತೆ ಹಾಗೂ ಗುಣಮಟ್ಟದ ಪರಿಈಲನೆಗಾಗಿ ಸಲ್ಲಿಸಿರುವ ಮನವಿಯ ಕುರಿತು ಈಗಾಗಲೇ ಈ ಕುರಿತು ಪತ್ರ ಬರೆಯಲಾಗಿದ್ದು ಇದಕ್ಕೆ ಸ್ವಲ್ಪ ಕಾಲಾವಕಾಶ ಪಡೆಯಲಿದೆ ಎಂದರು

Leave a Reply

Your email address will not be published. Required fields are marked *