Share this news

ಕಾರ್ಕಳ:ಪಾನಮತ್ತ ಯುವಕನ ಆವಾಂತರದಿಂದ ಕಾರೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೆಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಮಲ್ಪೆಗೆ ಅತಿವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಲೂರಿನ‌ ತರಕಾರಿ ಅಂಗಡಿಗೆ ನುಗ್ಗಿದೆ.
ಬೆಂಗಳೂರಿನಿಂದ 4 ಮಂದಿ ಯುವಕರು KA 04 MX 0744 ನೋಂದಣಿ ಸಂಖ್ಯೆಯ ಕಾರಿನಲ್ಲಿ ಮಲ್ಪೆಗೆ ಕಾರ್ಕಳದ ಮೂಲಕ ಹೋಗುತ್ತಿದ್ದಾಗ ಬೈಲೂರಿನಲ್ಲಿ ಈ ದುರ್ಘಟನೆ ನಡೆದಿದ್ದು,ಕಾರಿನಲ್ಲಿ ಮಧ್ಯದ ಬಾಟಲಿಗಳು ಪತ್ತೆಯಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತ ನಡೆಸಿದ ಯುವಕರು ಪರಾರಿಯಾಗಲು ಯತ್ನಿಸಿ ಕಾರಿನ ಟಯರ್ ಪಂಕ್ಚರ್ ಆಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಪಘಾತದ ಸಂದರ್ಭದಲ್ಲಿ ತರಕಾರಿ ಅಂಗಡಿಯಲ್ಲಿ ಗ್ರಾಹಕರು ಇಲ್ಲದ ಹಿನ್ನೆಲೆಯಲ್ಲಿ ಭಾರೀ ಅಪಘಡ ತಪ್ಪಿದಂತಾಗಿದೆ

Leave a Reply

Your email address will not be published. Required fields are marked *