ಕಾರ್ಕಳ: ಸುಮಾರು 800 ವರ್ಷಗಳ ಪುರಾತನ ಬೈಲೂರು ಬೀದಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾ ಮೂಹೂರ್ತದ ಪೂರ್ವಭಾವಿಯಾಗಿ ಶಿಲಾ ಮೆರವಣಿಗೆಯು ಜು. 9 ರಂದು ನಡೆಯಿತು.

ದೇವಸ್ಥಾನದ ಅರ್ಚಕರಾದ ಬ್ರಹ್ಮಶ್ರೀ ಬೈಲೂರು ನರಸಿಂಹ ತಂತ್ರಿಯವರು ಧಾರ್ಮಿಕ ವಿದಿವಿಧಾನಗಳನ್ನು ನೆರವೇರಿಸಿದರು. ಬೈಲೂರು ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದ ಸ್ವಾಮಿಜೀಯವರು ಶಿಲಾ ಮೇರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಾಜಿತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಾಸಕ ವಿ. ಸುನಿಲ್ ಕುಮಾರ್, ಬಿ. ಕರುಣಾಕರ ಹೆಗ್ಡೆ, ಕಾರ್ಯಾದ್ಯಕ್ಷರಾದ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ, ನಾಗೇಶ್ ಶೆಟ್ಟಿ, ಪೂಣೆ, ಪ್ರಕಾಶ್ ಶೆಟ್ಟಿ ಬೆರ್ಮೋಟ್ಟು, ಅರುಣ್ ಶೆಟ್ಟಿ, ಜೆ. ಸುಧೀರ್ ಹೆಗ್ಡೆ, ಸಂತೋಷ್ ವಾಗ್ಲೆ, ರಮೇಶ್ ಕಿಣಿ, ಸಹದೇವ ಕಿಣಿ, ಸುಮಿತ್ ಶೆಟ್ಟಿ, ಮಹೇಶ್ ಶೆಣೈ, ವಿಕ್ರಂ ಹೆಗ್ಡೆ ಹಾಗೂ ಗ್ರಾಮಸ್ಥರು ಭಕ್ತಾಧಿಗಳು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಪೂರ್ಣಕುಂಭದೊAದಿಗೆ ಮಹಿಳೆಯರು, ಭಜನ ತಂಡಗಳು, ಕೆರಳ ಚೆಂಡೆ ಹಾಗೂ ಸ್ಥಳೀಯ ಚೆಂಡೆ ಬಳಗದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬೈಲೂರು ಪ್ರಸಾದ್ ಶೆಟ್ಟಿ ನಿರ್ಮಾಣದ ಭಕ್ತಿ ಸುದಿಪು ದೇವರ ಭಕ್ತಿ ಗೀತೆ ಬಿಡುಗಡೆಗೊಳಿಸಲಾಯಿತು.

