Share this news

ಕಾರ್ಕಳ:ಸೈಬರ್ ಕ್ರೈಂಗಳು ರಾಷ್ಟ್ರಮಟ್ಟದಲ್ಲಿ ಹರಡಿವೆ. ಆದರೆ ಪೊಲೀಸ್ ಇಲಾಖೆಗಳು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ ಅಪರಾಧ ಪತ್ತೆ ಮಾಡಲು ತುಂಬಾ ಸಮಯ ತಗಲುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ.ಸೈಬರ್ ಕ್ರೈಂ ಮಾಹಿತಿ ಶಿಬಿರ ಹಮ್ಮಿಕೊಂಡ ಪತ್ರಕರ್ತ ಸಂಘದ ಕಾರ್ಯ ಶ್ಲಾಘನೀಯ  ಎಂದು ಉಡುಪಿ ಜಿಲ್ಲಾ ಎ ಎಸ್ಪಿ ಸಿದ್ದಲಿಂಗಪ್ಪ ಹೇಳಿದರು.

ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಸಹಯೋಗದೊಂದಿಗೆ ಇಂದು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ  ಹಾಲ್ಡಿನ್ ಗ್ಲಾಸ್ ಹಾಲ್ ನಲ್ಲಿ ಸೈಬರ್ ಕ್ರೈಂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಶೈಲಿಯ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತಿದ್ದು ತಾಂತ್ರಿಕ ಶೈಲಿಯ ಅಪರಾಧಗಳು ಹ್ಯಾಕರ್ಸ್ಗಳ ಮೂಲಕ ತಮ್ಮ ಖಾಸಗಿ ಮಾಹಿತಿಗಳು ಕದಿಯಲಾಗುತ್ತಿದೆ.ಸೈಬರ್ ಪ್ರಕರಣಗಳಲ್ಲಿ ನೈಜೀರಿಯಾ ಪ್ರಜೆಗಳೆ ಹೆಚ್ಚು ಬಾಗಿಯಾಗುತಿದ್ದಾರೆ ಎಂದರು. ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತಿದ್ದು ವಿದ್ಯಾವಂತ ನಿರುದ್ಯೋಗಿಗಳೆ ಇದರ ಟಾರ್ಗೆಟ್ ಆಗುತ್ತಿದ್ದಾರೆ. ಪೋಲಿಸ್ ಇಲಾಖೆಗಳು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ ಸೈಬರ್ ಕ್ರೈಮ್ ಗಳು ರಾಷ್ಟ್ರೀಯ ಮಟ್ಟಗಳಲ್ಲಿ ಹರಡಿಕೊಂಡಿರುವುದರಿAದ ಪತ್ತೆಮಾಡಲು ತುಂಬಾ ಸಮಯ ಹಿಡಿಯುತ್ತಿದೆ. ಅದಕ್ಕಾಗಿ ಅಪರಾಧ ತಡೆಯಲು ಅರಿವು ಮೂಡಿಸುವುದೆ ನಮ್ಮ ಮೊದಲ ಆದ್ಯತೆಯಾಗಿದೆ. ಸೈಬರ್ ಕ್ರೈಮ್ ಮಾಹಿತಿ ಶಿಬಿರದ ಹಮ್ಮಿಕೊಂಡ ತಾಲೂಕು ಪತ್ರಕರ್ತರ ಸಂಘಕ್ಕೆ ಧನ್ಯವಾದ ತಿಳಿಸಿದರು.

ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ನಮ್ಮ ದೌರ್ಬಲ್ಯಗಳನ್ನು ಸೈಬರ್ ಕ್ರೈಮ್ ಅಪರಾಧಿಗಳು ಬಳಸಿಕೊಂಡು ವಂಚನೆ ಮಾಡುತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಜತ ಮಹೋತ್ಸವ ಸಮಿತಿ ಸಂಚಾಲಕ , ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ, ರಾಜ್ಯದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು ಗಾಂಜಾ ವ್ಯಸನಿಗಳ ಟಾರ್ಗೆಟ್ ಆಗುತಿದ್ದಾರೆ. ಕಾರ್ಕಳ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಮ್ ಮಾಹಿತಿ ಹಾಗು ಡ್ರಗ್ಸ್ ಹಾವಳಿ ತಡೆಗಟ್ಟಲು ಮಾಹಿತಿ ಶಿಬಿರಗಳು ನಡೆಸಲಿದ್ದೇವೆ ಎಂದರು.
ಲಯನ್ಸ್ ಗವರ್ನರ್ ಲ| ಡಾ. ನೇರಿ ಕರ್ನಾಲಿಯೋ ಬೆಳಕು ಸಂಯೋಜಕರ ಸಂಘಟನೆ ಜಿಲ್ಲಾಧ್ಯಕ್ಷ  ಕೆ. ಧರ್ಮರಾಜ್ ಮಾತನಾಡಿದರು.

ಈ ಸಂದರ್ಬದಲ್ಲಿ ಜೆ. ಸುಧೀರ್ ಹೆಗ್ಡೆ ಬೈಲೂರು , ಸಂತೋಷ್ ವಾಗ್ಳೆ, ಲಯನ್ಸ್ ಕ್ಲಬ್ ನೀರೆ-ಬೈಲೂರು ಅಧ್ಯಕ್ಷ  ಲ| ಕೆ. ಸುಜಯ್ ಜತ್ತನ್ನ, ಸ.ಪ.ಪೂ ಕಾಲೇಜು ಪ್ರಾಂಶುಪಾಲ ಗುರುಮೂರ್ತಿ ಟಿ., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ ನಗರ ಠಾಣೆಯ ಪೋಲೀಸ್ ಉಪ ನಿರೀಕ್ಷಕ ಸಂದೀಪ್ ಶೆಟ್ಟಿ, ಮಣಿಪಾಲ ಪೋಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ ಸಾರ್ವಜನಿಕರು ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ  ಮಾಹಿತಿ ನೀಡಿದರು.

ಪತ್ರಕರ್ತ ವಾಸುದೇವ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು, ಹರೀಶ್ ಸಚ್ಚರಿಪೇಟೆ ಧನ್ಯವಾದ ವಿತ್ತರು.

 

 

 

 

 

 

 

 

Leave a Reply

Your email address will not be published. Required fields are marked *