ಮುಲ್ಕಿ: ನೆಹರು ಯುವ ಕೇಂದ್ರ ಮಂಗಳೂರು ಯುವಕ ಸಂಘ(ರಿ)ತೋಕೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ(ರಿ)ತೋಕೂರು, ಗಾನ ತರಂಗಿಣಿ ಟ್ರಸ್ಟ್(ರಿ)ಇವರ ಸಂಯುಕ್ತ ಆಶ್ರಯದಲ್ಲಿ ದಾಸ ಸಿಂಚನ 1481ನೇ ಕಾರ್ಯಕ್ರಮ ನಡೆಯಿತು.

ಯುವಕ ಸಂಘದ ಸುವರ್ಣ ಸಭಾಂಗಣದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಎಮ್ ಎಸ್ ಗಿರಿಧರ್
ಹಾಗೂ ವಸುಧಾ ಜಿ ದಾಸ ಸಾಹಿತ್ಯಗಳನ್ನು ವಿವರಣೆ ಸಹಿತ ಸುಶ್ರಾವ್ಯ ಹಾಗೂ ಭಕ್ತಿಪೂರ್ವಕ ವಾಗಿ ಹಾಡುವುದರ ಮೂಲಕ ನಡೆಸಿ ಕೊಟ್ಟರು.

ಡಾ||ವಂದನಾ ರಾವ್ ಯುವಕ ಸಂಘದ ಸ್ಥಾಪಕ ಸದಸ್ಯ ಸುಂದರ ಸಾಲಿಯಾನ್, ಸುಬ್ರಹ್ಮಣ್ಯ ಕೆ ರಾವ್, ಪುರುಷೋತ್ತಮ ಕೋಟ್ಯಾನ್, ವಿನೋದ್ ಕುಮಾರ್, ಮಯೂರ್, ವಿಮಲಾ ಶೆಟ್ಟಿಗಾರ್, ವನಜ ಸಾಲಿಯಾನ್, ಜಯಶ್ರೀ ಶೆಟ್ಟಿ, ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ಮಂಡಲ ಅಧ್ಯಕ್ಷೆ ಅನುಪಮಾ ಎ ರಾವ್ ಸ್ವಾಗತಿಸಿ ಭಜನಾ ಕಾರ್ಯದರ್ಶಿ ಬಿ ದಾಮೋದರ ಶೆಟ್ಟಿ ವಂದಿಸಿದರು.
