ನವದೆಹಲಿ: ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಜತೆ ನಂಟು ಹೊಂದಿರುವ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ದಳವು ಸೋಮವಾರ ಮುಂಜಾನೆ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 19 ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ ನಾಲ್ಕು, ಮಹಾರಾಷ್ಟ್ರದ ಮೂರು ಮತ್ತು ದೆಹಲಿಯ ಒಂದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.ಕಳೆದ ವಾರ ಎನ್‌ಐಎ ಅಧಿಕಾರಿಗಳು ಮಹಾರಾಷ್ಟ್ರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳಲ್ಲಿ ಒಬ್ಬ ಐಸಿಸ್ ಮಾಡ್ಯೂಲ್‌ನ ನಾಯಕನಾಗಿದ್ದು, ಹೊಸದಾಗಿ ಸೇರ್ಪಡೆಗೊಂಡವರಿಗೆ ನಿಷ್ಠೆಯ ಪ್ರಮಾಣ ವಚನ ಬೋಧಿಸುತ್ತಿದ್ದ. ದಾಳಿಯ ಸಮಯದಲ್ಲಿ ಎನ್‌ಐಎ ಅಮಾನ್ಯಗೊಂಡಿರುವ ಭಾರೀ ಪ್ರಮಾಣದ ನಗದು, ಶಸ್ತ್ರಾಸ್ತ್ರಗಳು, ಚೂಪಾದ ಉಪಕರಣಗಳು, ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಅಲ್ಲದೇ ವಶಕ್ಕೆ ಪಡೆದವರನ್ನು ತೀವೃ ವಿಚಾರಣೆಗೊಳಪಡಿಸಿ ಐಸಿಸ್ ಜಾಲದ ಇನ್ನಷ್ಟು ಮಾಹಿತಿ ಕಲೆಹಾಕಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ