ಮುಂಬೈ : ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಕಂಪನಿ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಜ್ಜಾಗಿದೆ. ರಿಯಲ್ ಎಸ್ಟೇಟ್ ಅನಾಲಿಟಿಕ್ಸ್ ಒಪ್ಪಂದದ ಪ್ರಕಾರ, ಪುಣೆಯ ಪಂಚಶೀಲ್ ಬ್ಯುಸಿನೆಸ್ ಪಾರ್ಕ್ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,850 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಇಗಿ ತಯಾರಕರು ಟೇಬಲ್‌ಸ್ಪೇಸ್ ಟೆಕ್ನಾಲಜೀಸ್‌ನೊಂದಿಗೆ ಐದು ವರ್ಷಗಳ ಗುತ್ತಿಗೆಗೆ ಸಹಿ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಟೆಸ್ಲಾದ ಇಬ್ಬರು ಹಿರಿಯ ಪ್ರತಿನಿಧಿಗಳು ಇವಿ ವಾಹನ ಘಟಕವನ್ನು ಸ್ಥಾಪಿಸಲು ಭಾರತದಲ್ಲಿ ಜಾಗಕ್ಕಾಗಿ ಅನ್ವೇಷಿಸುತ್ತಿದ್ದರು. ಇನ್ವೆಸ್ಟ್ ಇಂಡಿಯಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ದೇಶದಲ್ಲಿ 1 ಬಿಲಿಯನ್ ಹೂಡಿಕೆ ಮಾಡುವ ಚೀನಾದ ಇವಿ ತಯಾರಕ BYD’S (ಬಿಲ್ಡ್ ಯುವರ್ ಡ್ರೀಮ್ಸ್) ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ತಿರಸ್ಕರಿಸಿದೆ.
ಟೆಸ್ಲಾ ಕಂಪನಿಯ ಜಾಗತಿಕ ಪ್ರತಿಸ್ಪರ್ಧಿಗಳಾದ ಗ್ರೇಟ್ ವಾಲ್ ಮೋಟಾರ್ಸ್ ಮತ್ತು BYD ಭಾರತದಲ್ಲಿ ಅನುಮೋದನೆಗಾಗಿ ಕಾದುಕುಳಿತಿರುವಾಗ, ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಮಯ ಅನುಕೂಲಕರವಾಗಿದೆ. ಕಳೆದ ತಿಂಗಳು ಮೋದಿ ಅವರೊಂದಿಗಿನ ಭೇಟಿಯ ನಂತರ ಮಸ್ಕ್, ಅವರು (ಮೋದಿ) ನಿಜವಾಗಿಯೂ ಭಾರತದ ಬಗ್ಗೆ ಕಾಳಜಿ ವಹಿಸುತ್ತಾರೆ. ಏಕೆಂದರೆ ಅವರು ಭಾರತದಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ಇದನ್ನು ನಾವು ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದರು.