Share this news

ನವದೆಹಲಿ(ಏ.26): ಭಾರತದಲ್ಲಿ ಅತ್ಯುತ್ತಮ ಗುಣಟ್ಟದ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಇದೀಗ ಎಂಜಿ ಮೋಟಾರ್ಸ್ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಎಂಜಿ ಕೊಮೆಟ್ ಹೆಸರಿನ ಈ ಕಾರು ದೇಶದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟು ದಿನ ಟಾಟಾ ಟಿಯಾಗೋ ಇವಿ ಈ ಗೌರವಕ್ಕೆ ಪಾತ್ರವಾಗಿತ್ತು. ಇದೀಗ ಎಂಜಿ ಕೊಮೆಟ್ 7.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೊಚ್ಚ ಹೊಸ ಇವಿ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಮೇ.15 ರಿಂದ ಬುಕಿಂಗ್ ಆರಂಭಗೊಳ್ಳಲಿದೆ.  ಎಪ್ರಿಲ್ 27 ರಿಂದ ಟೆಸ್ಟ್ ಡ್ರೈವ್ ಆರಂಭವಾಗಲಿದೆ.

ಟಾಟಾ ಟಿಯಾಗೋ ಇವಿ 8.49 ಲಕ್ಷ ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಬಳಿಕ 8.69 ಲಕ್ಷ ರೂಪಾಯಿ ಬೆಲೆಗೆ ಏರಿಕೆಯಾಗಿತ್ತು. ಇದೀಗ ಎಂಜಿ ಕೊಮೆಟ್ ಕಾರು 7.89 ಲಕ್ಷ ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿ.ಮೀ ಮೈಲೇಜ್ ನೀಡಲಿದೆ. 1,640mm ಉದ್ದ ಹಾಗೂ 1,505mm ಉತ್ತರ ಹೊಂದಿರುವ ಸಣ್ಣ ಕಾರು. ಅಂದರೆ ಮೂರು ಮೀಟರ್ ಒಳಗಿನ ಸಣ್ಣ ಕಾರು. 12 ಇಂಚಿನ ಸ್ಟೀಲ್ ವ್ಹೀಲ್ಸ್ ಹೊಂದಿದೆ.

ಎಂಜಿ ಕೊಮೆಟ್ 17.3 KWH ಬ್ಯಾಟರಿ ಪ್ಯಾಕ್ ಹೊಂದಿದೆ. ಮೂರು ಡ್ರೈವಿಂಗ್ ಮೊಡ್‌ಗಳಿವೆ. ಇಕೋ, ಸ್ಪೋರ್ಟ್ಸ್ ಹಾಗೂ ನಾರ್ಮಲ್ ಆಯ್ಕೆಗಳಿವೆ. ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿ.ಮೀ ಮೈಲೇಜ್ ನೀಡಲಿದೆ. ಸಿಂಗಲ್ ಮೋಟಾರ್ ಹೊಂದಿರುವ ಎಂಜಿ ಕೊಮೆಟ್ 41HP ಪವರ್ ಹಾಗೂ 110NM ಪೀಕ್ ಟಾರ್ಕ್ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ.

ಎಂಜಿ ಕೊಮೆಟ್ 10.2 ಇಂಚಿನ್ ಟಚ್‌ಸ್ಕ್ರೀನ್ ಹೊಂದಿದೆ. ಆ್ಯಂಡ್ರಾಯ್ಡ್ ಅಟೋ ಪ್ಲೇ ಹಾಗೂ ಆ್ಯಪಲ್ ಕಾರ್ ಪ್ಲೇಗೆ ಸಪೋರ್ಟ್ ಮಾಡಬಲ್ಲ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಕಾರಿನ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ ಇಲ್ಲ. ಆದರೆ ಹೆಚ್ಚುವರಿ ಸ್ಟೋರೇಜ್ ಸ್ಪೇಸ್‌ಗೆ ನೀಡಲಾಗಿದೆ. ಬಿಳಿ, ಕಪ್ಪು ಹಾಗೂ ಸಿಲ್ವರ್ ಬಣ್ಣದಲ್ಲಿ ಕಾರು ಲಭ್ಯವಿದೆ. MG ಕೊಮೆಟ್ ಕಾರು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಈಗಾಗಲೇ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದು ಹ್ಯುಂಡೈ ಕೋನಾ, ಟಾಟಾ ನೆಕ್ಸಾನ್ ಮ್ಯಾಕ್ಸ್ ಇವಿಗೆ ಪ್ರತಿಸ್ಪರ್ಧಿಯಾಗಿದೆ. ಸರಿಸುಮಾರು 22 ಲಕ್ಷ ರೂಪಾಯಿ ಬೆಲೆಯಿರುವ ಈ ಕಾರು ಹಲವು ಫೀಚರ್ಸ ಹೊಂದಿದೆ. ಇದೀಗ ಎಂಜಿ ಕೊಮೆಟ್ ಎರಡನೇ ಇವಿಯಾಗಿದೆ. ಭಾರತದಲ್ಲಿ ಎಂಜಿ ಮೋಟಾರ್ಸ್ ಹೆಕ್ಟರ್ ಕಾರಿನಿಂದ ಪಯಣ ಆರಂಭಿಸಿದೆ. ಬಳಿಕ ಹೆಕ್ಟರ್ ಪ್ಲಸ್, ಗ್ಲೋಸ್ಟರ್ ಕಾರುಗಳನ್ನು ಬಿಡುಗಡೆ ಮಾಡಿದೆ. 

Leave a Reply

Your email address will not be published. Required fields are marked *