ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಲಂಕಾ ಭಾರತದ ಪ್ರಖರ ಬೌಲಿಂಗ್ ಗೆ ಕೇವಲ 50 ರನ್ನುಗಳಿಗೆ ಅಲೌಟ್ ಆಗುವ ಮೂಲಕ ಏಷ್ಯಾ ಕಪ್ ಇತಿಹಾದಲ್ಲೇ ಅತ್ಯಂತ ಕನಿಷ್ಟ ಮೊತ್ತ ಗಳಿಸಿದ ತಂಡವಾಗಿ ದಾಖಲೆ ಬರೆದಿದೆ.
ಭಾರತ ವೇಗಿ ಮೊಹಮ್ಮದ್ ಸಿರಾಜ್ ಅವರ ವೇಗದ ದಾಳಿಯನ್ನು ಎದುರಿಸಲಾಗದ ಲಂಕಾದ ಬ್ಯಾಟರ್ ಗಳು ಕೇವಲ ಎರಡಂಕಿಯನ್ನೂ ದಾಟಲಾಗದೇ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಕೇವಲ 15.2 ಓವರ್ ಗಳಲ್ಲಿನ ಲಂಕಾ ತಂಡವು ತನ್ನೆಲ್ಲಾ ವಿಕೆಟ್ ಕಳೆದುಕೊಂಡು 50 ರನ್ನು ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾಗಿ ಕ್ರೀಸ್ ಗೆ ಇಳಿದ ಕುಸಲ್ ಪಿರೇರಾ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಪರೇಡ್ ನಡೆಸಿದ ಬೆನ್ನಲ್ಲೇ ಲಂಕಾದ ದಿಗ್ಗಜ ಬ್ಯಾಟರ್ ಗಳು ಭಾರತದ ವೇಗದ ದಾಳಿಯನ್ನು ಎದುರಿಸಲಾಗದೇ ಪತರಗುಟ್ಟಿದರು. ಲಂಕಾದ 5 ಬ್ಯಾಟರ್ ಗಳು ಶೂನ್ಯಕ್ಕೆ ಔಟ್ ಆಗಿರುವುದು ಭಾರತದ ಪ್ರಖರ ಬೌಲಿಂಗ್ ದಾಳಿಗೆ ಸಾಕ್ಷಿಯಾಗಿತ್ತು.
ಶ್ರೀಲಂಕಾದ ಇಬ್ಬರು ಬ್ಯಾಟರ್ ಗಳಾದ ಕುಸಲ್ ಮೆಂಡಿಸ್ (17) ಹಾಗೂ ದುಸ್ಸನ್ ಹೇಮಂತ(13) ಕೇವಲ ಎರಡಂಕಿ ಮೊತ್ತ ಗಳಿಸಿದ್ದು ಹೊರತುಪಡಿಸಿದರೆ ನಾಲ್ವರು ಒಂದAಕಿ ಗಳಿಸಿ ಉಳಿದ ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಶ್ರೀಲಂಕಾ ಏಷ್ಯಾ ಕಪ್ ಇತಿಹಾಸಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದಂತಾಗಿದೆ.
ಶ್ರೀಲAಕಾದ ಎಲ್ಲಾ ವಿಕೆಟ್ ಗಳು ವೇಗಿಗಳ ಪಾಲಾಗಿದ್ದು, ವೇಗಿಗಳಾದ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 3 ಹಾಗೂ ಜಸ್ಪಿçತ್ ಬೂಮ್ರಾ ಒಂದು ವಿಕೆಟ್ ಪಡೆದರು