Share this news

ಕಾರ್ಕಳ : ಭ್ರಷ್ಟಾಚಾರದ ವಿರುದ್ದವೇ ನನ್ನ ಹೋರಾಟವಾಗಿದ್ದು, ಪಾರದರ್ಶಕ ಆಡಳಿತ ಹಿಂದುತ್ವದ ರಕ್ಷಣೆಗೆ ಕಟಿಬದ್ದನಾಗಿದ್ದೇನೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಅವರು ಪರಪು ಪಾಂಚಜನ್ಯ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹಾಗೂ ಇಂಧನ ಸಚಿವರು ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ. ಹೆಬ್ರಿ ತಾಲೂಕಿನ ಶಿವಪುರದ ಗಜಾನಂದ ಸುವರ್ಣ ಹಾಗೂ ವಿದ್ಯಾ ಸುವರ್ಣ ಹೆಸರಿನಲ್ಲಿ 67.94 ಎಕರೆ ಜಮೀನು ಖರೀದಿಸಿ ಅದನ್ನು ಕೈಗಾರಿಕಾ ಉದ್ದೇಶಕ್ಕಾಗಿ ದುಪ್ಪಟ್ಟು ಬೆಲೆಗೆ ಭೂಪರಿವರ್ತನೆ ಮಾಡಲಾಗಿದೆ, ಆದರೆ ಗಜಾನಂದ ಅವರ ಕುಟುಂಬದ ವಾರ್ಷಿಕ ಆದಾಯ ಕೇವಲ 9 ಲಕ್ಷವಾಗಿದ್ದು ಅವರು 4 ಕೋಟಿ ಮೌಲ್ಯದ ಆಸ್ತಿ ಖರೀದಿಸಲು ಹೇಗೆ ಸಾಧ್ಯವಾಗಿಯಿತು ಎಂದು ಪ್ರಶ್ನಿಸಿದರು. ಕೈಗಾರಿಕೆಗೆ ಮಾರಾಟವಾಗಿರುವ ಭೂಮಿಯಲ್ಲಿ ಸಚಿವರ ಕೈವಾಡವಿದ್ದು ಲೋಕಾಯುಕ್ತ ತನಿಖೆಯನ್ನು ನಡೆಸುವಂತೆ ದೂರು ನೀಡಿದ್ದೇನೆ. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲು ಮೀನಾಮೇಷ ಎಣಿಸಿದ್ದಲ್ಲಿ ಲೋಕಾಯುಕ್ತ ಕಛೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.


ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 9 ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದಾರೆ. ಇಷ್ಟರವರೆಗೆ ಮೋದಿಯವರ ಮೇಲಾಗಲಿ, ಅವರ ಸಚಿವ ಸಂಪುಟದಲ್ಲಾಗಲೀ ಒಂದೇ ಒಂದು ಭ್ರಷ್ಟಚಾರದ ಕಪ್ಪು ಚುಕ್ಕೆ ನಮಗೆ ಕಾಣ ಸಿಗುವುದಿಲ್ಲ. ಆದರೆ ಅವರ ಹೆಸರು ಹೇಳಿ ಅಧಿಕಾರಕ್ಕೆ ಬಂದವರು, ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಕೆ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ದಾವಣಗೆರೆ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ ವಿರೂಪಾಕ್ಷಪ್ಪರ ವಿರುದ್ದ 2013ರಲ್ಲಿ ಸೈಟ್ ಹಂಚಿಕೆ ಹಗರಣಕ್ಕೆ ಸಂಬAಧಿಸಿದAತೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈವರೆಗೆ ಪ್ರಕರಣ ಇತ್ಯರ್ಥವಾಗಲಿಲ್ಲ. ಲೋಕಾಯುಕ್ತ ಸಂಸ್ಥೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಕಳವನ್ನು ಭ್ರಷ್ಟಚಾರದಿಂದ ಮುಕ್ತಗೊಳಿಸಿ, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ರೂಪಿಸುವ ಉದ್ದೇಶ ನನ್ನದ್ದಾಗಿದ್ದು, ಅದಕ್ಕಾಗಿ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ನಿಮ್ಮ ಸಮಸ್ಯೆಗೆ ನಮ್ಮ ಸ್ಪಂದನೆ ಎನ್ನುವ ಮಾಹಿತಿಯುಳ್ಳ ಕರಪತ್ರವನ್ನು ಪ್ರಮೋದ್ ಮುತಾಲಿಕ್ ಬಿಡುಗಡೆಗೊಳಿಸಿದರು. ಜನಸಾಮಾನ್ಯರು ತಮ್ಮ ಸಮಸ್ಯೆಗಳಿದ್ದಲ್ಲಿ ನೇರವಾಗಿ ಕಚೇರಿಗೆ ಬರಬಹುದು ಅಥವಾ ಮೊಬೈಲ್ ನಂಬರ್ ಸಂಪರ್ಕಿಸಿದರೆ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದರು.


ಸುದ್ದಿಗೋಷ್ಠಿಯಲ್ಲಿ ಶ್ರಿರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ನ್ಯಾಯವಾದಿ ಹರೀಶ್ ಅಧಿಕಾರಿ, ನಿಟ್ಟೆ ಗ್ರಾ.ಪಂ.ಸದಸ್ಯ ಸುಭಾಬಾಶ್ಚಂದ್ರ ಹೆಗ್ಡೆ, ಪುರಸಭೆ ಸದಸ್ಯ   ಲಕ್ಷ್ಮೀನಾರಾಯಣ   ಮಲ್ಯ, ಮತ್ತು ದಿವ್ಯಾ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *