Share this news

ದಕ್ಷಿಣಕನ್ನಡ : ಮಂಗಳೂರಿನ ಮರೋಳಿ ಎಂಬಲ್ಲಿ ರಂಗ್‌ದ ಬರ್ಸಾ ಹೆಸರಿನಲ್ಲಿ ಹೋಳಿ ಸಂಭ್ರಮ ನಡೆಸಿದ ವೇಳೆ ಡಿಜೆ ಪಾರ್ಟಿಯಲ್ಲಿ ಆಶ್ಲೀಲ ವರ್ತನೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಜರಂಗದ ದಾಳಿ ನಡೆಸಿದ್ದು, ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಇಂದು (ಭಾನುವಾರ) ರಂಗ್ ದೇ ಬರ್ಸಾ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು, ಡಿಜೆ ಪಾರ್ಟಿ ಮಾಡುತ್ತಾ ಹೋಳಿ ಎರಚಿ ಸಂಭ್ರಮಿಸುತ್ತಿದ್ದರು. ಅಶ್ಲೀಲ ವರ್ತನೆ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗದಳ ದಾಳಿ ನಡೆಸಿದೆ. ಕಾರ್ಯಕ್ರಮ ಆರಂಭವಾಗುತ್ತಿದ್ದAತೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಅಲ್ಲಿದ್ದ ವಸ್ತುಗಳನ್ನು ಕಿತ್ತೆಸೆದು ಬ್ಯಾನರ್ ಹರಿದುಹಾಕಿ ದಾಂಧಲೆ ನಡೆಸಿದ್ದಾರೆ. ನಂತರ ಕಾರ್ಯಕ್ರಮ ಆಯೋಜಕರ ಮೇಲೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಂಕನಾಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *