ಕಾರ್ಕಳ:ಮಂಗಳೂರು-ಕಾರ್ಕಳ ರಾಷ್ಟಿçÃಯ ಹೆದ್ದಾರಿ 169ರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಹಲವೆಡೆ ಅಸಮರ್ಪಕ ಕಾಮಗಾರಿ ನಡೆಸಲಾಗುತ್ತಿದ್ದು ಇದರಿಂದ ವಾಹನ ಚಾಲಕರಿಗೆ ಗೊಂದಲವಾಗುತ್ತಿದ್ದು ಈ ರಸ್ತೆಯಲ್ಲಿ ಸಂಚರಿಸುವ ಸವಾರರ ಜೀವಕ್ಕೆ ಸಂಚಕಾರ ಎದುರಾಗಿದೆ
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿ ಎಂಬಲ್ಲಿ ಪ್ರಶಾಂತ್ ಕಾಮತ್ ರವರ ಮನೆ ಮುಂದಿರುವ ಮುಖ್ಯ ರಸ್ತೆಯಿಂದ ಇರ್ವತ್ತೂರು ಸಂಪರ್ಕ ರಸ್ತೆಗೆ ನಿರ್ಮಿಸಲಾಗಿರುವ ತಾತ್ಕಾಲಿಕ ರಸ್ತೆಯು ಅತ್ಯಂತ ಕಿರಿದಾಗಿದೆ ಇದಲ್ಲದೇ ರಸ್ತೆಗೆ ಹಾಕಲಾಗಿರುವ ಸಣ್ಣ ಮೋರಿ ಪೈಪ್ ಕೂಡ ಮುರಿದುಹೋಗಿದೆ. ಈ ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಇತರ ವಾಹನ ಚಾಲಕರು ಬಹಳ ಕಷ್ಟಪಟ್ಟು ಪ್ರಯಾಣಿಸುತ್ತಿದ್ದು, ಈ ಅಪಾಯಕಾರಿ ರಸ್ತೆಯ ಬಗ್ಗೆ ಸಂಬAಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.
ತಾತ್ಕಾಲಿಕ ರಸ್ತೆಯ ಅಡಿಯ ಮೋರಿಯನ್ನು ಬದಲಾಯಿಸಿ ರಸ್ತೆಯನ್ನು ಅಗಲ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ದಿಲೀಪ್ ಬಿಲ್ಡ್ ಕಾನ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಸಾಣೂರು ಯುವಕ ಮಂಡಲದ ಮೈದಾನದ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸದಿದ್ದಲ್ಲಿ ಮಣ್ಣು ಕುಸಿದು ರಸ್ತೆಗೆ ಬೀಳುವ ಅಪಾಯವಿದ್ದು ಇದರಿಂದ ವಾಹನಗಳಿಗೆ ಮತ್ತು ರಸ್ತೆಯಲ್ಲಿ ನಡೆದಾಡುವವರ ಪ್ರಾಣಕ್ಕೂ ಅಪಾಯದ ಸಾಧ್ಯತೆಯಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ಈಗಾಗಲೇ ಮಳೆ ಪ್ರಾರಂಭವಾಗಿದ್ದು ರಸ್ತೆ ಸುರಕ್ಷತೆಯ ಕುರಿತು ಹೆದ್ದಾರಿ ಇಲಾಖೆ ಎಚ್ಚರಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡದಿದ್ದರೆ ಸಾಣೂರು ಗ್ರಾಮಸ್ಥರು ಹೆದ್ದಾರಿ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ