Share this news

ಮಂಗಳೂರು : ಮಂಗಳೂರಿನ ಜೆರೋಸಾ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬಳು ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಮಕ್ಕಳಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದು,ಈ ಕುರಿತು ಮಕ್ಕಳ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಕುರಿತು ಪೋಷಕರೊಬ್ಬರು ಮಾಡಿರುವ ಆಡಿಯೋ ವೈರಲ್ ಆಗಿದ್ದು ಇದೀಗ ಪೋಷಕರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಾಲಾ ಶಿಕ್ಷಕಿ ಪ್ರಭಾ ಎಂಬಾಕೆ ಶ್ರೀರಾಮ ದೇವರಲ್ಲ ಅದು ಕಲ್ಲು, ಅಯೋಧ್ಯೆಯಲ್ಲಿ ಕಲ್ಲಿಗೆ ಡೆಕೋರೇಷನ್ ಮಾಡಿ ಪೂಜೆ ಮಾಡ್ತಾರೆ ರಾಮ ದೇವರು ಇಲ್ಲವೆಂದು ಮುಗ್ಧ ಮಕ್ಕಳ ಮುಂದೆ ಹೇಳಿದ್ದಾರೆ ಎನ್ನಲಾಗಿದ್ದು,ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಮಾತ್ರವಲ್ಲದೇ ಧರ್ಮಗಳ ಬಗ್ಗೆ ವಿಷಬೀಜ ಬಿತ್ತುತ್ತಿದ್ದಾರೆಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ

ತರಗತಿಯಲ್ಲಿ ಪಠ್ಯಕ್ಕೆ ಸಂಬಂಧ ಪಡದ ಹಿಂದೂ ಧರ್ಮ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರಂತೆ ಶಿಕ್ಷಕಿ ಸಿಸ್ಟರ್ ಪ್ರಭಾ. ಅಷ್ಟೇ ಅಲ್ಲದೆ ಮೋದಿ ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ರೈಲಿನಲ್ಲಿ ಜನರನ್ನು ಕೊಂದಿದ್ದಾರೆ ಅಂತೆಲ್ಲಾ ಮುಗ್ಧ ಮಕ್ಕಳಮುಂದೆ ಹೇಳಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಪಾಠದ ಮಧ್ಯೆ ಇದೆಲ್ಲ ಹೇಳುವ ಅವಶ್ಯಕತೆ ಸಿಸ್ಟರ್ ಪ್ರಭಾಗೆ ಇದೆಯೇ? ನಾವು ಹೆಡ್‌ಮಾಸ್ಟರ್‌ ಭೇಟಿಯಾಗಿ ತರಾಟೆಗೆ ತೆಗೆದುಕೊಂಡಿದ್ದೇವೆ ಹಾಗೂ ಸಿಸ್ಟರ್ ಫ್ರಭಾ ಅವರನ್ನು ತಕ್ಷಣವೇ ಮಾಡುವಂತೆ ಆಗ್ರಹಿಸಿದ್ದೇವೆ. ಒಂದು ವೇಳೆ ಅಮಾನತು ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ. ಸದ್ಯ ಮೂರು ದಿನಗಳ ಕಾಲಾವಕಾಶ ನೀಡಿದ್ದೇವೆ ಅಷ್ಟರೊಳಗೆ ಅಮಾನತು ಮಾಡಡಿದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಪೋಷಕರು ಹೇಳಿದ್ದಾರೆ
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲು ಎಳೆಯ ಮಕ್ಕಳಿಗೆ ತಮ್ಮ ಧರ್ಮದ ವಿರುದ್ಧವೇ ಪ್ರಚೋದಿಸುವ ಇಂತಹ ಶಿಕ್ಷಕಿಯನ್ನು ಅಮಾನತು ಮಾಡುವ ಬದಲು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ

 

Leave a Reply

Your email address will not be published. Required fields are marked *