Share this news

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ  ಮಾಡಿಕೊಂಡಿರುವ ದಾರುಣ ಘಟನೆ ಇಂದು (ಮಾರ್ಚ್ 31)  ಮಂಗಳೂರಿನ  ಕೆ.ಎಸ್.ರಾವ್ ರಸ್ತೆಯ ಕರುಣಾ ಲಾಡ್ಜ್​​ನಲ್ಲಿ ನಡೆದಿದೆ.

ದಂಪತಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಿಜಯನಗರ ನಿವಾಸಿಗಳು ಎಂದು ತಿಳಿದುಬಂದಿದೆ. ದೇವೇಂದ್ರಪ್ಪ(48), ನಿರ್ಮಲಾ(48), ಚೈತ್ರಾ(9), ಚೈತನ್ಯ(9) ಮೃತರು. ಪತ್ನಿ, ಮಕ್ಕಳಿಗೆ ವಿಷಕುಡಿಸಿದ ಬಳಿ ದೇವೇಂದ್ರಪ್ಪ ನೇಣಿಗೆ ಶರಣಾಗಿದ್ದಾನೆ.  ಮಾರ್ಚ್​ 27ರಂದು ರೂಮ್​ ಬುಕ್ ಮಾಡಿದ್ದ ಕುಟುಂಬ, ನಿನ್ನೆ (ಮಾರ್ಚ್ 30) ಸಂಜೆ ರೂಮ್​ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಇಂದು ಬೆಳಗ್ಗೆ ಆದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 

ಸ್ಥಳಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ, ಪರಿಶೀಲನೆ ನಡೆಸಿದ್ದು, ಡೆತ್​ನೋಟ್​​ ಪತ್ತೆಯಾಗಿದೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ

Leave a Reply

Your email address will not be published. Required fields are marked *