ಮಂಗಳೂರು: ಮಂಗಳೂರಿನ ಕದ್ರಿ ಮೈದಾನದಲ್ಲಿ ಮಾ.12ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ‍್ರಜಾಗೃತಿ ಸಭೆ ಜರುಗಿತು. ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದ ಮಂತ್ರ ಘೋಷದೊಂದಿಗೆ ಕಾರ್ಯಕ್ರಮ ಶುಭಾರಂಭಗೊAಡಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಅಮೃತೇಶ್ ಎನ್.ಪಿ. ಮಾತನಾಡಿ, ಧರ್ಮಾಂಧರು ಇನ್ನೂ ಸುಧಾರಿಸಿಕೊಳ್ಳದಿದ್ದರೆ ಈ ಸಭೆಯ ಮುಖಾಂತರ ಎಸ್.ಡಿ.ಪಿ.ಐ. ಸಂಘಟನೆಯನ್ನು ರದ್ದು ಪಡಿಸಲು ಠರಾವು ಕೊಡಬೇಕಾಗಬಹುದು. ಧರ್ಮಕ್ಕೆ ಕೈ ಹಾಕಿದಲ್ಲಿ ಧರ್ಮಚಕ್ರವು ನಿಮ್ಮನ್ನು ಬಿಡುವುದಿಲ್ಲ. ಹಿಂದೂ ರಾಷ್ಟ್ರ ಸಭೆಯ ಮುಖಾಂತರ ನಾವು ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತೇವೆ. ಹಿಂದುತ್ತ್ವದ ಅಡಿಯಲ್ಲಿ ನಾವೆಲ್ಲರೂ ಒಂದಾಗೋಣ ಎಂದು ತಿಳಿಸಿದರು.

ಸಭೆಯಲ್ಲಿ ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಮಾತನಾಡಿ, ಧರ್ಮಾಚರಣೆಯನ್ನು ಕೃತಿಯಲ್ಲಿ ಮಾಡುವುದರಿಂದ ದೇವತಾ ಚೈತನ್ಯವು ಸಿಕ್ಕಿ ಅಧ್ಯಾತ್ಮಿಕ ಲಾಭವಾಗುತ್ತದೆ. ಹಿಂದೂ ರಾಷ್ಟ್ರವನ್ನು ಸಂಖ್ಯಾಬಲದಿAದ ಅಲ್ಲ, ಅಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸಿ ನಿರ್ಮಾಣ ಮಾಡಬೇಕು. ಪ್ರತಿಯೊಬ್ಬ ಹಿಂದುವೂ ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯನ್ನು ಮಾಡಿದರೆ ಶೀಘ್ರವೇ ಹಿಂದೂ ರಾಷ್ಟದ ಸ್ಥಾಪನೆಯಾಗುತ್ತದೆ ಎಂದರು.

ಸಾಮಾಜಿಕ ಹೋರಾಟಗಾರರಾದ ದಿನೇಶ್ ಜೈನ್ ಮಾತನಾಡಿ, ಎಲ್ಲಾ ಹಿಂದೂಗಳು ಜಾತಿ, ಮತ, ಸಂಪ್ರದಾಯ, ಸಂಘಟನೆಗಳ ಹೆಸರನ್ನು ಮರೆತು, ಏಕಮನಸ್ಕರಾಗಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಒಟ್ಟಾಗಬೇಕಾಗಿದೆ ಎಂದರು.

ಹಿAದೂ ಜನಜಾಗೃತಿ ಸಮಿತಿಯ ಗುರುಪ್ರಸಾದ ಗೌಡ ಮಾತನಾಡಿ, ಬಹುಸಂಖ್ಯಾತರ ರಕ್ಷಣೆಗಾಗಿ, ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ರಾಷ್ಟ್ರಜಾಗೃತಿ ಸಭೆಯ ಆಯೋಜನೆಯಾಗಿದೆ. ಧರ್ಮಾಂಧರ ಜಿಹಾದಿ ಮಾನಸಿಕತೆಯಿಂದ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಇವುಗಳ ಮೂಲಕ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ಕಳೆದ 20 ವರ್ಷಗಳಿಂದ ಹಿಂದೂ ರಾಷ್ಟ್ರ ನಿರ್ಮಾಣದ ಬೇಡಿಕೆಯನ್ನು ಸಮಿತಿಯು ಮಾಡುತ್ತಿರುವುದರ ಪರಿಣಾಮವಾಗಿ ಎಲ್ಲಾ ಹಿಂದೂ ಸಂಘಟನೆಗಳು ಈಗ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿದ್ದಾರೆ.

ಭಾರತವು ಹಲವಾರು ದೇಶದ ಜನರಿಗೆ ಆಶ್ರಯ ನೀಡಿದೆ, ಆದರೆ ಹಿಂದೂಗಳಿಗೆ ಆಶ್ರಯ ನೀಡುವ ಒಂದೇ ಒಂದು ಹಿಂದೂ ರಾಷ್ಟ್ರವೂ ಇಲ್ಲ. ಈ ಪುಣ್ಯಭೂಮಿಯಲ್ಲಿ ಹಿಂದೂ ರಾಷ್ಟ್ರದ ಸೂರ್ಯನ ಉದಯವನ್ನು ನೋಡಲು ನಾವೆಲ್ಲರೂ ತನು, ಮನ, ಧನ ಮತ್ತು ಅಗತ್ಯವಿದ್ದರೆ ಸರ್ವಸ್ವವನ್ನೂ ಸಮರ್ಪಣೆ ಮಾಡಬೇಕಾಗಿದೆ. ನಾವೆಲ್ಲರೂ ಸಂಘಟಿತ ಪ್ರಯತ್ನ ಮಾಡಿದಲ್ಲಿ ಹಿಂದೂ ರಾಷ್ಟ್ರದ ಮುಂಜಾವು ದೂರವಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣವಾದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಎಂದರು.

ಸಭೆಯಲ್ಲಿ ಸನಾತನ ಸಂಸ್ಥೆಯ ಸಂತರಾದ ರಮಾನಂದ ಗೌಡ, ವಿನಾಯಕ ಕರ್ವೆ, ರಾಧಾ ಪ್ರಭು, ಮೊದಲನೆಯ ಬಾಲಸಂತರಾದ ಭಾರ್ಗವರಾಮ ಪ್ರಭು, ಕದ್ರಿ ವಾರ್ಡ್ ನ ನಗರ ಪಾಲಿಕೆ ಸದಸ್ಯ ಮನೋಹರ್ ಶೆಟ್ಟಿ, ಪದವು ಸೆಂಟ್ರಲ್ ವಾರ್ಡ ನ ನಗರಸಭಾ ಸದಸ್ಯ ಕಿಶೋರ್ ಕೊಟ್ಟಾರಿ, ಯೋಗ ಗುರುಗಳಾದ ಜಗದೀಶ್, ಡಾ. ಆಶಾ ಜ್ಯೋತಿ ರೈ, ಹಿಂದೂ ಯುವ ಸೇನೆಯ ಭಾಸ್ಕರ್ ಚಂದ್ರಶೆಟ್ಟಿ, ಉದ್ಯಮಿ ಗಣೇಶ್ ಬಾಳಿಗ, ಹಿಂದೂ ಜಾಗರಣ ವೇದಿಕೆ ಸುರತ್ಕಲ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ಪಂದನ ಸಂಘಟನೆ ಸುರತ್ಕಲ್, ವೀರಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ, ವಿಶ್ವ ಹಿಂದೂ ಪರಿಷತ್ ಬೆಂಗ್ರೆ, ಕೇಸರಿ ತತ್ವ ಬಳಗ ಸುರತ್ಕಲ್, ತುಳುನಾಡ ಸೇನೆಯ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

