Share this news

ಬೆಂಗಳೂರು: ರಾಜ್ಯದಲ್ಲಿ ಚಲನಚಿತ್ರಗಳು, ಸೀರಿಯಲ್ ಗಳಲ್ಲಿ ಮಕ್ಕಳು ನಟಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅವರ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತಿದೆ. ಈ ಕಾರಣದಿಂದಾಗಿ ಇನ್ನುಮುಂದೆ ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತು ರಾಜ್ಯ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಕ್ಕಳನ್ನು ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಮಕ್ಕಳು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ಬಳಿಕವೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಸಿಗಲಿದೆ. ಒಂದು ದಿನದಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ನಟನೆಗೆ ಬಳಸಿಕೊಳ್ಳಬಾರದು. ತಿಂಗಳಲ್ಲಿ ಕೇವಲ 27 ದಿನಗಳು ಮಾತ್ರವೇ ಮಕ್ಕಳನ್ನು ಶೂಟಿಂಗ್ ನಲ್ಲಿ ಬಳಿಸಿಕೊಳ್ಳಬೇಕು ಎಂಬುದಾಗಿಯೂ ಷರತ್ತು ವಿಧಿಸಿದೆ.

ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಲ ನಟ, ನಟಿಯಾಗಿ ಸೀರಿಯಲ್ ನಲ್ಲಿ ಮಕ್ಕಳು ನಟಿಸುವುದಕ್ಕೆ ನಿರ್ಮಾಪಕರು, ಆಯೋಜಕರು, ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂಬುದಾಗಿ ತಿಳಿಸಲಾಗಿದೆ.

ಒಂದು ವೇಳೆ ಕಾರ್ಮಿಕ ಇಲಾಖೆಯ ಈ ಆದೇಶ ಪಾಲಿಸದೇ ಮಕ್ಕಳನ್ನು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿಕೊಳ್ಳೋದಕ್ಕೆ ಆಯೋಜಕರು, ನಿರ್ಮಾಪಕರು ಬಳಿಸಿಕೊಂಡಿದ್ದೇ ಆದಲ್ಲಿ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

 

 

Leave a Reply

Your email address will not be published. Required fields are marked *