ಕಾರ್ಕಳ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಕೆಡಿಸಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಭಾನುವಾರ ಜನಜಾಗೃತಿ ವೇದಿಕೆ ವತಿಯಿಂದ ಕಾರ್ಕಳದಲ್ಲಿ ಭಾನುವಾರ ನಡೆದ ಧರ್ಮಸಂರಕ್ಷಣಾ ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪವರ್ ಟಿವಿ ಖಾಸಗಿ ಸುದ್ಧಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಮಾತನಾಡಿರುವ ಕೀಳುಮಟ್ಟದ ಮಾತುಗಳಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶ ವ್ಯಕ್ತವಾಗಿದೆ.
ವೇದಿಕೆಯಲ್ಲಿದ್ದ ವಿವಿಧ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಆಸಿನರಾಗಿದ್ದ ವೇದಿಕೆಯಲ್ಲೇ ಸಮಾವೇಶದ ಮೂಲ ಉದ್ದೇಶ ಮರೆತು ಭಾಷಣ ಆರಂಭಿಸಿದ ರಾಕೇಶ್ ಶೆಟ್ಟಿ ತನ್ನ ಒಂದು ಗಂಟೆಯ ಭಾಷಣವನ್ನು ಕೇವಲ ವೈಯುಕ್ತಿಕ ನಿಂದನೆಗೆ ಬಳಸಿಕೊಂಡ ಪರಿಣಾಮ ಗಣ್ಯರು ಹಾಗೂ ಸ್ವಾಮೀಜಿಗಳಿಗೆ ತೀವೃ ಇರಿಸುಮುರುಸು ಅನುಭವಿಸುವಂತಾಗಿದೆ. ಬಹುತೇಕ ಗಣ್ಯರು ಹಾಗೂ ಮಠಾಧೀಶರು ಸಭ್ಯತೆಯ ಎಲ್ಲೆಯಲ್ಲೇ ಆಧರ್ಮದ ವಿರುದ್ಧ ಮಾತುಗಳನ್ನಾಡಿದರೆ, ಸಭೆಯಲ್ಲಿ ಕೊನೆಗೆ ಮಾತು ಆರಂಭಿಸಿದ ರಾಕೇಶ್ ಶೆಟ್ಟಿಯವರು ಸಾವಿರಾರು ಸಾವರ್ಚಜನಿಕರ ಸಮ್ಮುಖದಲ್ಲೇ ಮಹೇಶ್ ಶೆಟ್ಟಿಯವರ ವಿರುದ್ಧ ತೀರಾ ಕೆಟ್ಟ ಹಾಗೂ ಅವಾಚ್ಯ ಪದಗಳನ್ನು ಬಳಸಿ ಸಭ್ಯತೆಯನ್ನೇ ಮರೆತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶಕ್ಕೆ ಕಾರಣವಾಗಿದೆ.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಈ ಹೋರಾಟವು ಮತ್ತೆ ತಿರುವು ಪಡೆದುಕೊಂಡಿತ್ತು. ಇದೇ ವಿಚಾರ ಮುಂದಿಟ್ಟುಕೊAಡು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಕೇಶ್ ಶೆಟ್ಟಿಯವರು ಹಲವು ಸಂದರ್ಭಗಳಲ್ಲಿ ತಮಗೆ ವೇದಿಕೆ ಸಿಕ್ಕಾಗಲೆಲ್ಲ ಕೀಳುಮಟ್ಟದ ಅವಾಚ್ಯ ಪದಗಳಿಂದ ನಿಂದನೆಗೆ ಬಳಸಿಕೊಳ್ಳುತ್ತಿದ್ದರು. ಇತ್ತ ಮಹೇಶ್ ಶೆಟ್ಟಿಯವರೂ ಕೂಡ ತಮಗೆ ಸಿಕ್ಕ ಅವಕಾಶದಲ್ಲಿ ವಿರೋಧಿಗಳನ್ನು ಹಣಿಯುವುದರಲ್ಲಿ ಹಿಂದೆಬಿದ್ದಿಲ್ಲ. ಕಾರ್ಕಳದ ವೇದಿಕೆಯಲ್ಲಿ ಧರ್ಮಾಧಿಕಾರಿಗಳ ವಿರುದ್ಧ ಮಹೇಶ್ ಶೆಟ್ಟಿ ಹಾಗೂ ಅವರ ತಂಡದ ವಿರುದ್ದz ಅಸಂಬದ್ಧ ಪದಬಳಕೆಯ ಆರೋಪವೂ ಕೇಳಿಬಂದಿತ್ತು.
ಯಾವುದೇ ಹೋರಾಟವಾಗಲಿ ಅಥವಾ ಸಂಘಟನೆಯಾಗಲಿ ತಮ್ಮ ಮೂಲ ಉದ್ದೇಶ ಮರೆಯಬಾರದು, ವ್ಯಕ್ತಿ, ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯ ಅಥವಾ ವೈಯುಕ್ತಿಕ ದ್ವೇಷ ಇರಲಿ, ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಬಳಸುವ ಪದಗಳು ಅಥವಾ ಮಾತುಗಳು ಎಂದಿಗೂ ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಯಾಕೆಂದರೆ ಸಾರ್ವಜನಿಕ ಜೀವನದಲ್ಲಿರುವವರಿಗೆ ಕೀಳುಮಟ್ಟದ ಪದಬಳಕೆ ಶೋಭೆ ತರುವುದಿಲ್ಲ, ಸಭೆಯ ಮೂಲಉದ್ದೇಶ ಮರೆತು ಬಹಿರಂಗವಾಗಿ ಅಶ್ಲೀಲ ಪದಪ್ರಯೋಗದಿಂದ ವೇದಿಕೆ ಹಂಚಿಕೊAಡವರ ಘನತೆಗೆ ಧಕ್ಕೆಯಾಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ

