ಇಂಫಾಲ್: 3 ತಿಂಗಳಿನಿಂದ ಜನಾಂಗೀಯ ಘರ್ಷಣೆಗೆ ತುತ್ತಾಗಿರುವ ಮಣಿಪುರದಲ್ಲಿ ಗುರುವಾರವೂ ಹಿಂಸಾಚಾರ ಮುಂದುವರೆದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಜನ ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಬಿಷ್ಣುಪುರದಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಗಳನ್ನು ತಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ರಸ್ತೆಗಿಳಿದ ಕಾರಣದಿಂದಾಗಿ ಘರ್ಷಣೆ ಉಂಟಾಗಿದೆ. ಭದ್ರತಾ ಪಡೆಗಳು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಕುಕಿ ಸಮುದಾಯವನ್ನು ಹೂಳಲು ನಿರ್ಧರಿಸಿದ್ದ ತಾಯ್‌ಬಾಂಗ್ ಪ್ರದೇಶಕ್ಕೆ ಹೋಗಲು ಮಹಿಳೆಯರು ಆಗ್ರಹಿಸಿದ್ದಾರೆ. ಇವರನ್ನು ತಡೆಯಲು ಭದ್ರತಾ ಸಿಬ್ಬಂದಿ ಮುಂದಾದಾಗ ಘರ್ಷಣೆ ಉಂಟಾಗಿದೆ.
ಮತ್ತೆ ಘರ್ಷಣೆಗಳು ಆರಂಭವಾದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಮತ್ತೆ ಹಗಲು ಕರ್ಫ್ಯೂ ಜಾರಿ ಮಾಡಲಾಗಿದೆ. ಈಗಾಗಲೇ ರಾತ್ರಿ ವೇಳೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಮಣಿಪುರ ಹಿಂಸಾಚಾರದಲ್ಲಿ ಮಡಿದ ಕುಕಿ ಸಮುದಾಯದ ಸಾಮೂಹಿಕ ಅಂತ್ಯಸAಸ್ಕಾರದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಣಿಪುರ ಹೈಕೋರ್ಟ್ ಗುರುವಾರ ಆದೇಶಿಸಿದೆ. ಕುಕಿ ಸಮುದಾಯದ 35 ಮಂದಿಯನ್ನು ಸಾಮೂಹಿಕವಾಗಿ ಹೂಳಲು ಸಮುದಾಯ ನಿರ್ಧಾರ ಮಾಡಿತ್ತು. ಆದರೆ ಈ ಭೂಮಿಗೆ ಸಂಬAಧಿಸಿದAತೆ ವಿವಾದ ನಡೆಯುತ್ತಿರುವುದರಿಂದ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ. ಅಂತ್ಯಸAಸ್ಕಾರವನ್ನು 7 ದಿನ ಮುಂದೂಡಲು ಕುಕಿ ಸಮುದಾಯದ ಸಂಘಟನೆ ಒಪ್ಪಿಕೊಂಡಿದೆ.