ಕಾರ್ಕಳ : ತಾಲೂಕಿನ ಯರ್ಲಪಾಡಿ ಗ್ರಾಮದಲ್ಲಿ ಮದ್ಯವ್ಯಸನಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಯರ್ಲಪಾಡಿಯ ಶಾಂತಿಪಲ್ಕೆ ಎಂಬಲ್ಲಿನ ನಿವಾಸಿ ದೇವಿ ಎಂಬವರ ತಮ್ಮನ ಮಗ ಗಣೇಶ್ ಎಚ್.ಎಂ (20ವ) ಆತ್ಮಹತ್ಯೆ ಮಾಡಿಕೊಂಡ ಯುವಕ. ಗಣೇಶ್ ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದನು.
ಕಳೆದ 3 ದಿನದ ಹಿಂದೆ ಗಣೇಶ್ ಯರ್ಲಪಾಡಿಯಲ್ಲಿರುವ ಸಂಬAಧಿಕರಾದ ದೇವಿಯವರ ಮನೆಗೆ ಬಂದಿದ್ದ. ನಿನ್ನೆ (ಎ.14) ರಂದು ದೇವಿ ಅವರು ಗಣೇಶ್ ಅವರಿಗೆ ಕೆಲಸ ಮಾಡದೇ ಮನೆಯಲ್ಲಿ ಇರಬೇಡ ಕೆಲಸಕ್ಕೆ ಹೋಗು ಎಂದು ಬೈದು ಬುದ್ಧಿ ಹೇಳಿದ್ದರು.ಅದರಂತೆ ಗಣೇಶ್ ಸಂಜೆಯ ವೇಳೆಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಇಂದು(ಎ.15) ಬೆಳಿಗ್ಗೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.