ಮಂಗಳೂರು : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾದ ಮಂಗಳೂರಿನ ಎಡಪದವು ಬೋರುಗುಡ್ಡೆ ಶ್ರೀರಾಮ ನಗರ ನಿವಾಸಿ ರಾಘವೇಂದ್ರ ನಾಯ್ಕ್ ರಿಗೆ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಗಂಜಿಮಠದ ವತಿಯಿಂದ ವೈದ್ಯಕೀಯ ನೆರವನ್ನು ಸಂಘದ ಅಧ್ಯಕ್ಷರಾದ ಯೋಗ ಶಿಕ್ಷಕ ಶೇಖರ ಕಡ್ತಲ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ನಾಯ್ಕ್ ಮುಚ್ಚೂರು, ಉಪಾಧ್ಯಕ್ಷರಾದ ಕೇಶವ ನಾಯ್ಕ್, ಜೊತೆ ಕಾರ್ಯದರ್ಶಿ ನಾರಾಯಣ ನಾಯ್ಕ್ ಗರಡಿ, ಸಂಘಟನಾ ಕಾರ್ಯದರ್ಶಿ ಪುರಂದರ ನಾಯ್ಕ್ ಕೋರ್ಡೆಲ್ ಹಾಗೂ ಸದಸ್ಯರಾದ ಮಹಾಬಲ ನಾಯ್ಕ್ ಮುಚ್ಚೂರು ಮತ್ತಿತರರು ಉಪಸ್ಥಿತರಿದ್ದರು.


