Share this news

ಕಾರ್ಕಳ: ಗ್ರಾಮಸಭೆಗಳಲ್ಲಿ ಚರ್ಚೆಯಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾತ್ರ ಅತೀ ಮುಖ್ಯವಾಗಿದೆ.ಗ್ರಾಮದ ಸಮಗ್ರ ಅಭಿವೃದ್ದಿಗೆ ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಭಾಸ್ಕರ ಟಿ ಹೇಳಿದರು.
ಅವರು ಶುಕ್ರವಾರ ಅಜೆಕಾರು ರಾಮ ಮಂದಿರದಲ್ಲಿ ನಡೆದ ಮರ್ಣೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮಸಭೆಗಳು ಸಹಕಾರಿಯಾಗಿವೆ ಎಂದರು.

ಕುರುಡೇಲು ಎಂಬಲ್ಲಿನ ಎಸ್ ಟಿ ಕಾಲೊನಿಯಲ್ಲಿನ ಹೈಟೆನ್ಷನ್ ಲೈನಿನ ಹಳೆಯ ವಯರ್ ಗಳ ಬದಲಾವಣೆಗೆ ಅರ್ಜಿ ಸಲ್ಲಿಸಿ ಮೂರು ವರ್ಷವಾಗಿದೆ ಆದರೂ ಈವರೆಗೂ ವಯರ್ ಗಳನ್ನು ಬದಲಿಸಿಲ್ಲ ಎಂದು ಬ್ರ್ಯಾಝಿಲ್ ಡಿಸೋಜ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಜೆಕಾರು ಮೆಸ್ಕಾಂ ಜೆಇ ಈಗಾಗಲೇ ತಂತಿಗಳ ಬದಲಾವಣೆಗೆ ಕ್ರಮಕೈಗೊಳ್ಳಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಮರಳು ಸಾಗಾಟದ ವಿಚಾರವಾಗಿ ಗ್ರಾಮಸ್ಥರಾದ ಪ್ರಕಾಶ ಶೆಟ್ಟಿ ಮಾತನಾಡಿ,ಮರಳು ಸಾಗಾಟದಿಂದ ಪಂಚಾಯಿತಿಗೂ ಆದಾಯ ಬರುವಂತಾಗಬೇಕು ಕಾನೂನು ಪ್ರಕಾರವೇ ಮರಳುಗಾರಿಕೆ ನಡೆಯಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರು.

ಬೀದಿ ನಾಯಿಗಳ ಕಾಟದಿಂದ ಅಜೆಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.ಇದಕ್ಕೆ ಉತ್ತರಿಸಿದ ಪಿಡಿಓ ತಿಲಕರಾಜ್ ಸಂತಾನಹರಣ ಚಿಕಿತ್ಸೆ ಕೊಡುವ ಏಜೆನ್ಸಿ
ದಾಸಗದ್ದೆ ಅಂಗನವಾಡಿ ಸಂಪರ್ಕ ರಸ್ತೆ ಹದಗೆಟ್ಟಿದ್ದು ದುರಸ್ತಿಗೆ ಗ್ರಾಮಸ್ಥರಾದ ಉದಯ ಮನವಿ ಮಾಡಿದರು. ಈ ಕುರಿತು ಕ್ರಮದ ಭರವಸೆ ನೀಡಿದರು.
ಪಶು ಚಿಕಿತ್ಸಾಲಯದಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದ ರೈತರು ಹಾಗೂ ಹೈನುಗಾರರಿಗೆ ಸಮಸ್ಯೆಯಾಗುತ್ತಿದೆ ಈ ಕುರಿತು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಗ್ರಾಮಸಭೆಗಳಿಗೆ ಹಾಜರಾಗಬೇಕು,ಇದರಿಂದ ಒಂದೇ ವೇದಿಕೆಯಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಜ್ಯೋತಿ ಪೂಜಾರಿ, ಯಶೋಧಾ ಶೆಟ್ಟಿ,ಪಂಚಾಯಿ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್ ಸ್ವಾಗತಿಸಿ,ಪಂಚಾಯಿತಿ ಸದಸ್ಯ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು‌‌.

 

 

 

 

 

 

 

 

 

Leave a Reply

Your email address will not be published. Required fields are marked *