ಕಾರ್ಕಳ: ಮರ್ಣೆ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಬುಧವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರಭಾವತಿ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಮೇರಿ ಮಸ್ಕರೇನ್ಹಸ್ ಆಯ್ಕೆಯಾಗಿದ್ದಾರೆ.
ಒಟ್ಟು 24 ಸದಸ್ಯಬಲದ ಪಂಚಾಯಿತಿಯಲ್ಲಿ 14 ಬಿಜೆಪಿ ಬೆಂಬಲಿತ ಹಾಗೂ 10 ಸದಸ್ಯರು ಕಾಂಗ್ರೆಸ್ ಬೆಂಬಲಿತ ರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಪ್ರಭಾವತಿ ನಾಯಕ್ ಕಾಂಗ್ರೆಸ್ ಬೆಂಬಲಿತರಾಗಿ ಚರಿತ್ರಾ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪ್ರಭಾವತಿ ನಾಯಕ್ 14 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚರಿತ್ರಾ 10 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಮೇರಿ ಮಸ್ಕರೇನ್ಹಸ್ ಏಕೈಕ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಬೈಲೂರು ಪಂಚಾಯಿತಿ ಉಪಪ್ರಾಂಶುಪಾಲ ನಾಗರಾಜ್ ಚುನಾವಣಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಭಾವತಿ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೇರಿ ಮಸ್ಕರೇನಸ್ ಅವರಿಗೆ ಬಿಜೆಪಿ ನಾಯಕರಾದ ಹರೀಶ್ ನಾಯಕ್, ಪಂಚಾಯತ್ ಸದಸ್ಯ ರಾಘವೇಂದ್ರ, ಪ್ರಶಾಂತ್ ಶೆಟ್ಟಿ, ಗುರುಪ್ರಸಾದ್ ರಾವ್, ಬಿಜೆಪಿ ನಾಯಕರಾದ ನಂದಕುಮಾರ್ ಹೆಗ್ಡೆ, ರತ್ನಾಕರ ಅಮೀನ್, ಮಾಜಿ ಅಧ್ಯಕ್ಷರಾದ ಜ್ಯೋತಿ ಪೂಜಾರಿ, ಉಪಾಧ್ಯಕ್ಷ ಕುರುಂಬಿಲ ಹಾಗೂ ಪಂಚಾಯತ್ ಸದಸ್ಯ ಹರೀಶ್ ಕಿಚ್ಚ ಅಭಿನಂದನೆ ಸಲ್ಲಿಸಿದರು.





