ಪುತ್ತೂರು: ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ದಿ.ಅಚ್ಯುತ ಪೂಜಾರಿಯವರ ಧರ್ಮಪತ್ನಿ ಸುನೀತಿ(92) ಶನಿವಾರ ಮುಂಜಾನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯೋಸಹಜ ಖಾಯಿಲೆಯಿಂದ ಇತ್ತೀಚೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಮಾಜಿ ಸಚಿವ ವಿನಯಕುಮಾರ್ ಸೊರಕೆ,ಅಶೋಕ್ ಕುಮಾರ್ ಸೊರಕೆ, ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪುತ್ರಿ ಶಶಿಕಲಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.