Share this news

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉಪನಾಮಕ್ಕೆ ಸಂಬAಧಿಸಿದAತೆ, ತನ್ನ ಮೇಲೆ ಮಾನನಷ್ಟ ಮೊಕದ್ದಮೆಯಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ನೀಡಿದ ಸೂರತ್‌ನ್ಯಾಯಲಯದ ಆದೇಶವನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮೇಲ್ಮನವಿಯನ್ನು ಜುಲೈ 21 ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ವಿಷಯಕ್ಕೆ ಸಂಬAಧಿಸಿದAತೆ ಸುಪ್ರೀಂನಲ್ಲಿ ಪ್ರಸ್ತಾಪಿಸಿದ್ದು, ಇದೀಗ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರು ರಾಹುಲ್ ಗಾಂಧಿಯವರ ಮೇಲ್ಮನವಿಯ ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿದ್ದಾರೆ, ಜತೆಗೆ ಶೀಘ್ರ ವಿಚಾರಣೆಯನ್ನು ನಡೆಸುವಂತೆ ಅಭಿಷೇಕ್ ಮನು ಸಿಂಘ್ವಿ ಕೇಳಿಕೊಂಡಿದ್ದಾರೆ.


ಜುಲೈ 7 ರಂದು, ರಾಹುಲ್‌ಗಾಂಧಿ ಅವರಿಗೆ ಈ ಪ್ರಕರಣಕ್ಕೆ ಸಂಬAಧಿಸಿದAತೆ 2 ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ನೀಡಿದ ಆದೇಶದ ನಂತರ ಸುಪ್ರೀಂ ಕೋರ್ಟ್ಗೆ ರಾಹುಲ್ ಗಾಂಧಿ ಅವರು ಜು.15ರಂದು ಮನವಿ ಸಲ್ಲಿಸಿದ್ದರು.ಅನರ್ಹತೆಗೊಂಡಿರುವ ಸಂಸದ ಸ್ಥಾನವನ್ನು ಮತ್ತೆ ಪಡೆಯಲು ತನಗೆ 2 ವರ್ಷಗಳ ಜೈಲು ಶಿಕ್ಷೆ ನೀಡಿರುವ ಆದೇಶವನ್ನು ತಕ್ಷಣವೇ ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷೆಯ ಆದೇಶವು ವಾಕ್ ಸ್ವಾತಂತ್ರ‍್ಯ, ಮುಕ್ತ ಅಭಿವ್ಯಕ್ತಿ, ಮುಕ್ತ ಚಿಂತನೆ ಮತ್ತು ಮುಕ್ತ ಹೇಳಿಕೆ ಹಕ್ಕಿಗೆ ವಿರುದ್ಧವಾಗಿದೆ ಎಂದು ವಾದದಲ್ಲಿ ತಿಳಿಸಿದ್ದಾರೆ.


ರಾಜಕೀಯ ಪ್ರಚಾರದ ಸಂದರ್ಭದಲ್ಲಿ ದೇಶಕ್ಕೆ ವಂಚನೆ ಮಾಡಿದವರನ್ನು ಮತ್ತು ರಾಜಕೀಯವಾಗಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಕಠಿಣ ಶಿಕ್ಷೆಗೆ ಹೇಗೆ ಒಳಲಾಗುತ್ತದೆ. ಇದು ನೈತಿಕ ಭ್ರಷ್ಟತೆಯ ಕೃತ್ಯವಾಗಿದೆ ಮತ್ತು ಇದು ಪ್ರಜಾಸತ್ತಾತ್ಮಕ ವಾಕ್ ಸ್ವಾತಂತ್ರ‍್ಯಕ್ಕೆ ಧಕ್ಕೆ ತಂದಿದೆ ಎಂದು ಗಾಂಧಿಯವರ ಅರ್ಜಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *