ಮಂಗಳೂರು :ಹಿಂದೂ ರಾಷ್ಟ್ರವೆಂದರೆ ರಾಜಕೀಯ, ಕೋಮುವಾದವಲ್ಲ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರ. ಸಾವಿರಾರು ಹಿಂದೂ ಹೆಣ್ಣುಮಕ್ಕಳ ಜೀವನವನ್ನು ನಾಶ ಮಾಡುವ ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ, ಭಾರತದ ಆರ್ಥಿಕತೆಗೆ ಅಪಾಯಕಾರಿಯಾದ ಹಲಾಲ್ ಜಿಹಾದ್,ಲ್ಯಾಂಡ್ ಜಿಹಾದ್ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಹಿಂದೂಗಳ ಮೇಲಾಗುತ್ತಿರುವ ಅನ್ಯಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ .ಮಾರ್ಚ್.12 ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಹೇಳಿದರು.
ಮಂಗಳೂರಿನಲ್ಲಿ ಸುದ್ದೀಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ÷ ಪ್ರತಿಯೊಬ್ಬ ನಾಗರಿಕನೂ ಸಮಾನತೆ, ಬಂಧುತ್ವ ಮತ್ತು ನ್ಯಾಯವನ್ನು ಅನುಭವಿಸಬೇಕು ಎಂದು ಹೇಳಲಾಗಿದೆ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಆಯೋಗ, ಸಚ್ಚರ್ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯವಿದೆ. ಆದರೆ ಬಹುಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಲು ಯಾವುದೇ ಸಚಿವಾಲಯ ಅಥವಾ ಆಯೋಗ ಇಲ್ಲ. ದೇಶದಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳಷ್ಟೇ ಸರಕಾರೀಕರಣಗೊಳಿಸಲಾಗಿದ್ದು, ಮಸೀದಿ, ಚರ್ಚ್ಗಳು ಸರ್ಕಾರೀಕರಣ ಆಗಿಲ್ಲ. ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಅನುದಾನವಿದೆ, ಹಾಗಾದರೆ ಬಹುಸಂಖ್ಯಾತ ಹಿಂದೂಗಳು ಮಾಡಿದ ಅಪರಾಧವೇನು?. ಇದನ್ನೆಲ್ಲ ನೋಡಿದರೆ ಭಾರತದಲ್ಲಿ ನಿಜವಾಗಿಯೂ ಸೆಕ್ಯುಲರ್ ವ್ಯವಸ್ಥೆ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದರು.
ಕಳೆದ 1 ತಿಂಗಳಿನಿAದ ಸಮಿತಿಯ ಕಾರ್ಯಕರ್ತರು ಕಾನೂನಿನ ಚೌಕಟ್ಟಿನಲ್ಲಿ ಸಭೆಯ ನಿಮಿತ್ತ, ಮನೆ ಮನೆ ಪ್ರಸಾರ, ಆಮಂತ್ರಣ ಹಂಚುವುದು, ಪೋಸ್ಟರ್, ಪ್ಲೆಕ್ಸ್, ಹೋರ್ಡಿಂಗ್ಸ್ ಹಾಕುವುದು, ಮೈಕ್ ಅನೌನ್ಸಮೆಂಟ್, ಸಾಮಾಜಿಕ ಜಾಲತಾಣ ಹೀಗೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದು,ಈಗ ಎಸ್‌ಡಿಪಿಐ ಮತಾಂಧರು ಸಭೆಯ ಆಯೋಜಕರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಮತಾಂಧರನ್ನು ಮಟ್ಟ ಹಾಕಲು ಎಸ್.ಡಿ.ಪಿ.ಐ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಸಭೆಗಳು, ಹಲಾಲ್ ವಿರುದ್ಧ ಜಾಗೃತಿ ಸೇರಿದಂತೆ ರಾಷ್ಟ್ರ ಮತ್ತು ಧರ್ಮದ ಮೇಲೆ ಪರಿಣಾಮ ಬೀರುವ ವಿವಿಧ ವಿಷಯಗಳ ಕುರಿತು ಜನಜಾಗೃತಿ, ಉಪನ್ಯಾಸ, ಆಂದೋಲನ, ಪತ್ರಿಕಾ ಗೋಷ್ಠಿಗಳು, ಧರ್ಮಶಿಕ್ಷಣ ವರ್ಗಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಭಾ.ಜ.ಪ ದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ. ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಜೈನ್, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಕೊಟ್ಟಾರಿ ಮತ್ತು ಹಿಂದುಸ್ಥಾನ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ್ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯಲ್ಲಿ(ಎಡದಿಂದ) ಹಿಂದುಸ್ಥಾನ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ. ಲೋಕೇಶ್ ಉಳ್ಳಾಲ್, ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ. ಜಿಲ್ಲಾ ಸಹ ಸಂಚಾಲಕರಾದ ಶ್ರೀ. ದಿನೇಶ್ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಆನಂದ ಶೆಟ್ಟಿ ಅಡ್ಯಾರ್ ಮತ್ತು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಕೊಟ್ಟಾರಿ ಉಪಸ್ಥಿತರಿದ್ದರು.